ಅಮರಾವತಿ
ಲೋಕಸಭೆಯಲ್ಲಿ ಸಿಎಎ ಗೆ ಬೆಂಬಲ ನೀಡಿ ಆಂದ್ರದಲ್ಲಿ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಜಗನ್ ಈಗ ತಮ್ಮ ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮೋದಿ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದ್ದಾರೆ.
‘ಯಾವುದೇ ಕಾರಣಕ್ಕೂ ಎನ್‌ಆರ್‌ಸಿ ಗೆ ಬೆಂಬಲ ನೀಡುವುದಿಲ್ಲ, ಎನ್‌ಆರ್‌ಸಿ ಯನ್ನು ರಾಜ್ಯದಲ್ಲಿ ಜಾರಿ ಮಾಡುವುದಿಲ್ಲ’ ಎಂದು ಹೇಳಿದ್ದಾರೆ. ಆದರೆ ಇದೇ ಜಗನ್ ನೇತೃತ್ವದ ಪಕ್ಷದ ಸಂಸದರು ಲೋಕಸಭೆಯಲ್ಲಿ ಸಿಎಎ ಮಸೂದೆಗೆ ಬೆಂಬಲ ನೀಡಿ ಪರವಾಗಿ ಮತ ಚಲಾಯಿಸಿದ್ದರು.
ಜಗನ್ ಅವರು ಲೋಕಸಭೆಯಲ್ಲಿ ಬೆಂಬಲ ನೀಡಿ ಈಗ ಎನ್‌ಆರ್‌ಸಿ ಜಾರಿ ಮಾಡುವುದಿಲ್ಲ ಎಂದಿರುವುದರ ಬಗ್ಗೆ ಪರ-ವಿರೋಧ ಚರ್ಚೆಗಳು ಆಂಧ್ರ ರಾಜಕೀಯದಲ್ಲಿ ಆರಂಭವಾಗಿದ್ದು, ‘ಮುಸ್ಲೀಮರನ್ನು ಓಲೈಸಲು ಜಗನ್ ಹೀಗೆ ಮಾತನಾಡುತ್ತಿದ್ದಾರೆ’ ಎಂದು ಪ್ರತಿಪಕ್ಷಗಳು ಟೀಕಿಸಿವೆ .ಶಿವಸೇನಾ, ಬಿಜೆಪಿ, ಜೆಡಿಯು, ವೈಎಸ್‌ಆರ್‌ಪಿ ಸೇರಿ ಇನ್ನೂ ಕೆಲವು ಪಕ್ಷಗಳು ಸಿಎಎ ಬೆಂಬಲಿಸಿ ಮತ ಚಲಾಯಿಸಿದ್ದವು. ಆದರೆ ಈಗ ಈ ಎಲ್ಲ ಪಕ್ಷಗಳು ತಮ್ಮ ರಾಜ್ಯಗಳಲ್ಲಿ ಎನ್‌ಆರ್‌ಸಿ ಜಾರಿಗೆ ತರುವುದಿಲ್ಲವೆಂದು ಬಹಿರಂಗವಾಗಿ ಘೊಷಿಸಿವೆ.