ಮಾಧ್ಯಮಗಳ ವಿರುದ್ಧ ಚಾಟಿ ಬೀಸಿದ ಜಗನ್ ಮೋಹನ್ ರೆಡ್ಡಿ..!!

ಅಮರಾವತಿ

       ಮಾಧ್ಯಮಗಳ ವಿರುದ್ಧ ಆಂಧ್ರದ ಜಗನ್ ಮೋಹನ್ ರೆಡ್ಡಿ ಸರ್ಕಾರ ಮಹತ್ವದ ನಿರ್ಣಯವೊಂದನ್ನು ತೆಗೆದುಕೊಂಡಿದೆ. ಇಲಾಖೆಗಳಿಗೆ ಮಾಧ್ಯಮಗಳ ಮೇಲೆ ಪ್ರಕರಣ ದಾಖಲಿಸಲು ಮತ್ತು ಕಾನೂನು ಕ್ರಮ ಜರುಗಿಸಲು ಅಧಿಕಾರ ನೀಡಿದೆ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳಲ್ಲಿ ಸುಳ್ಳಿನ ಅಂಶವೇನಾದರು ಇದಲ್ಲಿ ,ಮಾಧ್ಯಮದವರಿಂದ ಬೆದರಿಕೆ ಅಥವಾ ದುರುದ್ಧೇಶ ಪೂರ್ವಕವಾಗಿ ಸುದ್ದಿ ಬಿತ್ತರಿಸುವುದು ಇನ್ನೂ ಮುಂತಾದ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ನಿರ್ಣಯ ಕೈಗೊಂಡಿರುವುದಾಗಿ ಜಗನ್ ಸರ್ಕಾರ ತಿಳಿಸಿದೆ.

      ಮಾಧ್ಯಮ ಎಂದರೆ ಅದು ಮುದ್ರಣವಾಗಲಿ ಟಿವಿಯಾಗಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಯಾವುದೇ ಮಾನ ಹಾನಿಕರ ಸುದ್ದಿ ಅಥವಾ ಸುಳ್ಳು ಸುದ್ದಿಗಳ ವಿರುದ್ಧ ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿ ಅಥವಾ ಆ ಮೇಲಿನ ಹಂತದ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳಬಹುದು ಎಂದು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಕ್ಕೆ  ಬರಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

 

Recent Articles

spot_img

Related Stories

Share via
Copy link