ಜಿಯೋದಿಂದ ದೇಶದ ಜನತೆಗೆ ಬಂಪರ್ ಆಫರ್..!!

ಮುಂಬೈ

   ದೇಶದ ಪ್ರಮುಖ  ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ವಾರ್ಷಿಕ ಸಭೆಯಲ್ಲಿ ಐತಿಹಾಸಿ ಯೋಜನೆ ಘೋಷಿಸಿದೆ.  ರಿಲಯನ್ಸ್ ಇಂಡಸ್ಟ್ರಿ ಸಂಸ್ಥೆಯ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಅವರು ವಾಡಿಕೆಯಂತೆ ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಗ್ರಾಹಕರಿಗೆ ಭರ್ಜರಿ ಕೊಡುಗೆ ಘೋಷಿಸಿದ್ದಾರೆ.

    ದೇಶದ ದೂರ ಸಂಪರ್ಕ ಕ್ಷೇತ್ರದಲ್ಲಿ ಜಿಯೋ ಮೂಲಕ ಹೊಸ ಕ್ರಾಂತಿಯನ್ನೇ ಸೃಷ್ಟಿಸಿರುವ ಅವರು ಮತ್ತೊಂದು ಹೊಸ ಯೋಜನೆಯನ್ನು ಘೋಷಿಸಿ ಇಡೀ ಟೆಲಿಕಾಂ ಜಗತ್ತೆ ಆಶ್ಚರ್ಯ ಪಡುವರೀತಿ ಮಾಡಿದ್ದಾರೆ

   ಇದೇ ಸೆಪ್ಟೆಂಬರ್ 5ರಂದು ದೇಶಾದ್ಯಾಂತ ಆರಂಭವಾಗಲಿರುವ ಜಿಯೊ ಫೈಬರ್ ನ ಸ್ಪೀಡ್ ಆರಂಭಿಕ 100 ಎಂಬಿಪಿಎಸ್  ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ವೇಗದ ಡೇಟಾ ಸಂಪರ್ಕನೀಡುವ ಐತಿಹಾಸಿಕ ಯೋಜನೆಯನ್ನು  ಘೋಷಿಸಿದ್ದಾರೆ.

ಹಾಗಿದ್ದರೆ ಇದರ ಬೆಲೆಯಷ್ಟು?   

     700 ರೂ.ದಿಂದ ಆರಂಭವಾಗಿ 10 ಸಾವಿರ ರೂ.ವರೆಗಿನ ಜಿಯೋ ಫೈಬರ್ ಆಫರ್, ದೇಶದ ಇಂಟರ್ನೆಟ್ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನೇ ಉಂಟು ಮಾಡಲಿದೆ ಎಂದು ಮುಖೇಶ್ ಭರವಸೆ ವ್ಯಕ್ತಡಿಸಿದ್ದಾರೆ.ಜಿಯೊ ಫಸ್ಟ್ ಡೇ ಫಸ್ಟ್ ಶೋ ಪ್ಲಾನ್ ಅನಾವರಣಗೊಳಿಸಿದ ಮುಖೇಶ್, ಪ್ರೀಮಿಯಂ ಜಿಯೊ ಫೈಬರ್ ಗ್ರಾಹಕರು ಪಡೆಯಲಿರುವ ವಿವಿಧ ಪ್ರಯೋಜನಗಳ ಪಟ್ಟಿ ಮಾಡಿದರು. ಈ ಯೋಜನೆ 2020ಕ್ಕೆ ಅಧಿಕೃತವಾಗಿ ಜಾರಿಗೆ ಬರಲಿದೆ.

    ಮೈಕ್ರೊಸಾಫ್ಟ್ ಜೊತೆ ರಿಲಯನ್ಸ್ ಸಹಭಾಗಿತ್ವ ಹೊಂದಲಿದ್ದು, ಜಿಯೊ ದೇಶಾದ್ಯಂತ ಡಾಟಾ ಕೇಂದ್ರಗಳನ್ನು ಸ್ಥಾಪಿಸಿದರೆ ಅದಕ್ಕೆ ಮೈಕ್ರೊಸಾಫ್ಟ್ ವೇದಿಕೆ ಒದಗಿಸಲಿದೆ ಎಂದು ಮುಖೇಶ್ ಘೋಷಿಸಿದರು.

    ಒಂದು ವರ್ಷದ ಅವಧಿಯಲ್ಲಿ ರಿಲಯನ್ಸ್ ಜಿಯೊ ಭಾರತದಲ್ಲಿ ಅತಿ ದೊಡ್ಡ ಸಂಪರ್ಕ ಜಾಲವನ್ನು ಸ್ಥಾಪಿಸಲಿದ್ದು, 14 ತಂತ್ರಜ್ಞಾನ ಸಂಬಂಧಿ ಸ್ಟಾರ್ಟ್’ಅಪ್’ಗಳ ಸ್ಥಾಪನೆಗೆ ಸಂಸ್ಥೆ ಮುಂದಾಗಿದೆ. ಒಂದು ಶತಕೋಟಿ ಮನೆಗಳಿಗೆ ಜಿಯೋ ಸಂಪರ್ಕ ಕಲ್ಪಿಸುವ ವಾಗ್ದಾನ ಮಾಡಿರುವ ಮುಖೇಶ್, ಜಿಯೊ ಫೈಬರ್ 2.4 ದಶಲಕ್ಷ ಸಣ್ಣ, ಮಧ್ಯಮ ಉದ್ಯಮಗಳನ್ನು ಸಶಕ್ತೀಕರಣಗೊಳಿಸಲಿದೆ ಎಂದು ಸ್ಪಷ್ಟಪಡಿಸಿದರು.

     ತಿಂಗಳಿಗೆ 500 ರೂ.ಗಳಲ್ಲಿ ಜಿಯೊ ಅನಿದಿರ್ಷಾವಧಿಯ ಅಂತಾರಾಷ್ಟ್ರೀಯ ಕರೆಯ ಆಫರ್ ನೀಡಲಿದ್ದು, ತಿಂಗಳಿಗೆ 500 ರೂ.ನ ಉಚಿತ ಹೆಚ್ ಡಿ/4ಕೆ ಎಲ್’ಇಡಿ ಟಿವಿ ಆರಂಭಿಕ ಆಫರ್ ಕೂಡ ಜಿಯೋ ಫೈಬರ್ ಗ್ರಾಹಕರಿಗೆ ಲಭ್ಯವಾಗಲಿದೆ.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap