ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಜಿಯೋ…!

ನವದೆಹಲಿ:

   ಕೆಲ ವರ್ಷಗಳ ಹಿಂದೆ ಟೆಲಿಕಾಂ ರಂಗದಲ್ಲಿ ಹೊಸ ಯುಗಕ್ಕೆ ಚಾಲನೆ ನೀಡಿದ ಮುಖೇಶ್ ಅಂಬಾನಿ ಅವರ ಜಿಯೋ ಈಗ ಗ್ರಾಹಕರಿಗೆ ನಿಧಾನವಾಗಿ ಶಾಕ್ ನೀಡಲು ಮುಂದಾಗಿದೆ.

  ಜಿಯೋ ಪ್ರವೇಶದ ನಂತರದಲ್ಲಿ ಟೆಲಿಕಾಂ ಕಂಪನಿಗಳು ಅಕ್ಷರಶಃ ತತ್ತರಿಸಿ ಹೋಗಿದ್ದಲ್ಲದೆ ತನ್ನ ಗ್ರಾಹಕರನ್ನು ಉಳಿಸಿಕೊಳ್ಳಲು ಹೆಣಗಾಡಿದ್ದು ಉಂಟು . ಜಿಯೋದಲ್ಲಿ ನಿಗದಿತ ಮೊತ್ತ ಪಾವತಿಸಿದರೆ ಒಳಬರುವ, ಹೊರಹೋಗುವ ಕರೆಗಳು, ಎಸ್ಎಂಎಸ್, ಡೇಟಾ ಸೌಲಭ್ಯ ಲಭ್ಯವಾಗುತ್ತಿತ್ತು.

  ಜಿಯೋ ಟೆಲಿಕಾಂ ಹೇಳುವ ಪ್ರಕಾರ, ಜಿಯೋ ನೆಟ್ ವರ್ಕ್ ಹೊರತುಪಡಿಸಿ ಉಳಿದ ಯಾವುದೇ ನೆಟ್ ವರ್ಕ್ ಬಳಸುವ ಮೊಬೈಲ್ ಫೋನ್ ಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಲಾಗುವುದು ಎಂದು ಜಿಯೋ ತಿಳಿಸಿದೆ. ಈ ಶುಲ್ಕಕ್ಕೆ ಪ್ರತಿಯಾಗಿ ಅದಕ್ಕನುಗುಣವಾಗಿ ಅಷ್ಟೇ ಪ್ರಮಾಣದ ಡೇಟಾ ಒದಗಿಸಲಾಗುತ್ತದೆ ಎಂದು ಹೇಳಲಾಗಿದೆ. ಜಿಯೋದಿಂದ ಏರ್ಟೆಲ್, ಬಿಎಸ್ಎನ್ಎಲ್, ವೋಡಾಫೋನ್ ಗಳಿಗೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ ಆರು ಪೈಸೆ ಶುಲ್ಕ ವಿಧಿಸಲಾಗುವುದು ಎನ್ನಲಾಗಿದೆ

   ಕೆಲ ಕಂಪನಿಗಳು ಸಿಮ್ ಸಕ್ರಿಯವಾಗಬೇಕೆಂದರೆ ನಿಗದಿತ ಮೊತ್ತವನ್ನು ಪಾವತಿಸಲು ಸೂಚಿಸಿದ್ದು, ಹಾಗೆ ಮಾಡಿದರೆ ಮಾತ್ರ ಒಳಬರುವ ಕರೆಗಳು ಸ್ವೀಕರಿಸಲು ಸಾಧ್ಯವಾಗುತ್ತದೆ. ತನ್ನ ಗ್ರಾಹಕರಿಗೆ ಹತ್ತಾರು ಸೌಲಭ್ಯ ನೀಡಿದ್ದ ಜಿಯೋ ಇದೀಗ ಹೊರಹೋಗುವ ಕರೆಗಳಿಗೆ ದರ ನಿಗದಿ ಮಾಡಿ ಗ್ರಾಹಕರಿಗೆ ಆಘಾತ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link