ನವದೆಹಲಿ:
ಕಾಂಗ್ರೇಸ್ ನ ಮಹತ್ವದ ಆಯುಧವಾದ ರಫೇಲ್ ಯುದ್ಧ ವಿಮಾನ ಖರೀದಿ ಅವ್ಯವಹಾರದ ಮೇಲೆ ಸಮರ ಸಾರಿದ್ದ ಕಾಂಗ್ರೇಸ್ ಗೆ ಮೇಲಿಂದ ಮೇಲೆ ಸೋಲು ಎದುರಾಗುತ್ತಿದ್ದು ಮೊದಲು ನ್ಯಾಯಾಲಯದಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಕಾಂಗ್ರೇಸ್ ತನ್ನ ಬಹುಮತದ ಕೊರತೆಯನ್ನು ಮರೆತು ಜಂಟಿ ಸದನ ಸಮಿತಿ ವಚಾರಣೆಗೆ ಪಟ್ಟು ಹಿಡಿದಿತ್ತು ಆದರೆ ಸಂಸದೀಯ ವ್ಯವಹಾರಗಳ ಮಂತ್ರಿಯವರು ಕುಲಂಕುಶವಾಗಿ ಪರಿಶೀಲಿಸಿ ಸಮಿತಿಯ ಅವಶ್ಯಕತೆ ಇಲ್ಲ ಎಂದಿದ್ದಾರೆ. ಪಟ್ಟು ಸಡಿಲಿಸದ ಕಾಂಗ್ರೇಸ್ ಗೆ ವಿತ್ತ ಸಚವರಾದ ಶ್ರೀ ಅರುಣ್ ಜೇಟ್ಲಿ ನ್ಯಾಯಾಲಯದಲ್ಲಿ ಇತ್ಯರ್ಥವಾದಂತಹ ಪ್ರಕರಣಕ್ಕೆ ಯಾವುದೇ ರೀತಿಯ ಸದನ ಸಮಿತಿಯ ವಿಚಾರಣೆ ಅಗತ್ಯವಿಲ್ಲ ಎಂದು ಹೇಳಿ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಎಂದು ವರದಿಯಾಗಿದೆ.
ಸಂಸದೀಯ ಧಿಕಾರಿಗಳು ಮತ್ತು ನ್ಯಾಯಾಂಗ ಇಲಾಖಾ ಪ್ರಮುಖರೊಂದಿಗೆ ಚರ್ಚೆ ನಡೆಸಿದ ಬಳಿಕ ಈ ಕುರಿತಂತೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದಾರೆ ರಫೇಲ್ ಒಪ್ಪಂದ ಕುರಿತು ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಸಾಧ್ಯವಿಲ್ಲ ೆಂದು ಹೇಳುವ ಮೂಲಕ ವಿವಾದಕ್ಕೆ ತಿಲಾಂಜಲಿ ಇಟ್ಟಿದ್ದಾರೆ. ಸುಪ್ರೀಂಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಮಹಾಲೇಖಪಾಲರ ಅಭಿಪ್ರಾಯವು ಪ್ರಾಧಾನ್ಯತೆ ಪಡೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಅವರ ಫೇಸ್ ಬುಕ್ ಮುಖಪುಟದ ಬರವಣಿಗೆಯನ್ನು ಇಲ್ಲಿ ಸ್ಮರಿಸಬಹುದು,
Arun Jaitley यांनी वर पोस्ट केले रविवार, १६ डिसेंबर, २०१८