ನವದೆಹಲಿ:
ಕಾಡುಗಳ್ಳ ವೀರಪ್ಪನ್ ಎನ್ಕೌಂಟರ್ ನ ನೇತೃತ್ವ ವಹಿಸಿದ್ದ (ನಿವೃತ್ತ) ಐಪಿಎಸ್ ಅಧಿಕಾರಿ ವಿಜಯ್ ಕುಮಾರ್ ಅವರನ್ನು ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ ಮತ್ತು ತಮಿಳು ನಾಡಿನ ನಿದ್ದೆ ಕೆಡಿಸಿದ್ದ ನರಹಂತಕ ವೀರಪ್ಪನ್ ನನ್ನು 2004ರಲ್ಲಿ ಹತ್ಯೆಗೈದ ಎಸ್‌ಟಿಎಫ್ ನ ಮುಖ್ಯಸ್ಥ ರಾಗಿದ್ದ ಐಪಿಎಸ್ ಅಧಿಕಾರಿ ವಿಜಯ ಕುಮಾರ್ ಅವರನ್ನು ಇದೀಗ ಗೃಹ ಸಚಿವಾಲಯದ ನೂತನ ಹಿರಿಯ ಭದ್ರತಾ ಸಲಹೆಗಾರರಾಗಿ ನೇಮಕ ಮಾಡಲಾಗಿದೆ. ಈ ಕುರಿತಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
