ಮುಂಬೈ:
ದೇಶದ ತೀವ್ರ ಕುತೂಹಲ ಕೆರಳಿಸಿದ ಮಹಾರಾಷ್ಟ್ರದ ಸರ್ಕಾರ ರಚೆನೆ ಕಸರತ್ತು ಮುಗಿಯುವ ಹಂತ ತಲುಪಿದೆ , ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಬಿಜೆಪಿ ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಶಿವಸೇನಾ ಹೇಳಿದೆ.
ತಮ್ಮ ನಿವಾಸ ಮಾತೋಶ್ರೀಯಲ್ಲಿ ಪಕ್ಷದ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಈ ಹಿಂದೆ ನಿರ್ಧಾರ ತೆಗೆದುಕೊಂಡಂತೆ ಬಿಜೆಪಿ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ. ಆದರೆ ಈ ಹಿಂದೆ ಲೋಕಸಭೆ ಚುನಾವಣೆಗೂ ಮುನ್ನ ಎರಡು ಪಕ್ಷಗಳ ನಡುವೆ ಏನು ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂಬುದನ್ನು ಮಾತ್ರ ಅವರು ಬಹಿರಂಗಪಡಿಸಲಿಲ್ಲ
ಇಂದು ಬೆಳಗ್ಗೆ 11.30ಕ್ಕೆ ಆರಂಭವಾದ ಶಿವಸೇನಾ ಶಾಸಕರ ಸಭೆ ಸುಮಾರು 90 ನಿಮಿಷಗಳ ಕಾಲ ನಡೆಯಿತು. ಸಭೆಯ ಬಳಿಕ ಎಲ್ಲಾ ಶಾಸಕರನ್ನು ಖಾಸಗಿ ಹೋಟೆಲ್ ಗೆ ಶಿಫ್ಟ್ ಮಾಡಲಾಗಿದೆ ಮತ್ತು ಶಾಸಕರ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದ್ದು ರೂಮ್ ನಲ್ಲಿಡಲಾಗಿದೆ ಎಂಧು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ