ನವದೆಹಲಿ:
ದೆಹಲಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳೊಡನೆ ಗುದ್ದಾಡಿ ದೆಹಲಿ ಗದ್ದುಗೆ ಏರಿದ ಅರವಿಂದ್ ಕೇಜ್ರಿವಾಲ್ ಇಂದು ಸತತ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಹಲವು ರಾಜಕೀಯ ಘಟನಾವಳಿಗಳಿಗೆ ಸಾಕ್ಷಿಯಾದ ರಾಮ್ ಲೀಲಾ ಮೈದಾನದಲ್ಲಿ ಸಾವಿರಾರು ಆಪ್ ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.ಆಪ್ ಬೆಂಬಲಿಗರು ಪಕ್ಷದ ಧ್ವಜ, ಪೋಸ್ಟರ್, ತ್ರಿವರ್ಣಧ್ವಜ, ಫಲಕಗಳನ್ನು ಹಿಡಿದು ತಮ್ಮ ನೆಚ್ಚಿನ ನಾಯಕನ ಪರ ಘೋಷಣೆ ಕೂಗುವುದು ಕಂಡುಬಂತು.
ದೆಹಲಿ ನಿರ್ಮಾಣಕ್ಕೆ ಕಾರಣಕರ್ತರಾಗಿದ್ದ ಸುಮಾರು 50 ಜನರು ಕೇಜ್ರಿವಾಲ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವೇದಿಕೆ ಹಂಚಿಕೊಂಡರು. ಅವರಲ್ಲಿ ಶಿಕ್ಷಕರು, ಬಸ್ ಮಾರ್ಷಲ್ ಗಳು, ನೈರ್ಮಲ್ಯ ನೌಕರರು, ಅಗ್ನಿಶಾಮಕ ಸಿಬ್ಬಂದಿಯ ಕುಟುಂಬಸ್ಥರು ಸಿಎಂ ಜೊತೆ ವೇದಿಕೆ ಹಂಚಿಕೊಂಡಿದ್ದು ಕಂಡುಬಂತು.ರಾಮಲೀಲಾ ಮೈದಾನದಲ್ಲಿ ಸಾಂಪ್ರದಾಯಿಕ ನೃತ್ಯಗಳು ಆಯೋಜನೆಗೊಂಡಿದ್ದವು. ಅಭಿವೃದ್ಧಿಪರ ಹೆಸರಿನಲ್ಲಿ ಪ್ರಚಾರ ಮಾಡಿ 62 ಸೀಟುಗಳನ್ನು ಗೆದ್ದುಕೊಂಡ ಆಪ್ ಅಧಿಕಾರದ ಗದ್ದುಗೆ ಏರಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
