ನವದೆಹಲಿ
ಕೇಂದ್ರ ಸರ್ಕಾರ ಕೆಲವು ದೊಡ್ಡ ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದು, ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಅನ್ನು ಮುಚ್ಚಲು ಮುಂದಾಗಿದೆ ಕಾಂಗ್ರೆಸ್ ಭಾನುವಾರ ಆರೋಪಿಸಿದೆ.
ಎನ್‌ಡಿಎ ಸರ್ಕಾರವು ತನ್ನ ಬಂಡವಾಳಶಾಹಿ ಸ್ನೇಹಿತರ ಪರವಾಗಿ ಬಿಎಸ್‌ಎನ್‌ಎಲ್ ಅನ್ನು ಮುಚ್ಚುವ ಯೋಜನೆಯನ್ನು ರೂಪಿಸಿದೆ. ಬಾಕಿ ಇರುವ ವಿದ್ಯುತ್ ಬಿಲ್‌ಗಳಿಂದಾಗಿ ಸುಮಾರು 1,083 ಟವರ್‌ಗಳು ಮತ್ತು 524 ವಿನಿಮಯ ಕೇಂದ್ರಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದ್ದು, ಇದು ಲಕ್ಷಾಂತರ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಹೇಳಿದರು.
ಸಾರ್ವಜನಿಕ ಟೆಲಿಕಾಂ ಆಪರೇಟರ್ ಅನ್ನು ದುರ್ಬಲಗೊಳಿಸುವುದರಿಂದ ಅದನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡಬಹುದು ಎಂಬುದು ನರೇಂದ್ರ ಮೋದಿ ಸರ್ಕಾರದ ಏಕೈಕ ಉದ್ದೇಶ ಎಂದು ಅವರು ಆರೋಪಿಸಿದರು.ಪ್ರಸ್ತುತ, ಬಿಎಸ್ಎನ್ಎಲ್ ತೀವ್ರ ಆರ್ಥಿಕ ತೊಂದರೆಯಲ್ಲಿದ್ದು, 13,000 ಕೋಟಿ ರೂ. ಸಾಲ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ