ಕೇಂದ್ರದಿಂದ ಎರಡು ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ ..!!

ನವದೆಹಲಿ

        ಬಿಜೆಪಿ ಹಿರಿಯ ಮುಖಂಡರಾದ ಹರಿಚಂದನ್, ಅನುಸೂಯಾ ಉಯಿಕೆ ಅವರನ್ನು ಆಂಧ್ರಪ್ರದೇಶ ಹಾಗೂ ಛತ್ತೀಸ್‌ಘಡದ ನೂತನ ರಾಜ್ಯಪಾಲರನ್ನಾಗಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಮಂಗಳವಾರ ನೇಮಕ ಮಾಡಿದ್ದಾರೆ.

       2004 ರಲ್ಲಿ ಬಿಜೆಡಿ – ಬಿಜೆಪಿ ಒಡಿಶಾ ಸರ್ಕಾರದಲ್ಲಿ ಮಾಜಿ ಕಾನೂನು ಸಚಿವರಾಗಿದ್ದ ಹಿರಿಯ ಬಿಜೆಪಿ ಮುಖಂಡ ಬಿಸ್ವಾ ಭೂಷಣ್ ಹರಿಚಂದನ್ (85) ಅವರನ್ನು ಆಂಧ್ರಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.ಪ್ರಸ್ತುತ ಇಎಸ್‌ಎಲ್‌ ನರಸಿಂಹನ್‌ ಆಂಧ್ರ ಮತ್ತು ತೆಲಂಗಾಣದ ರಾಜ್ಯಪಾಲರಾಗಿದ್ದಾರೆ.

      ಹಿರಿಯ ಬಿಜೆಪಿ ನಾಯಕಿ ಮತ್ತು ರಾಜ್ಯಸಭೆಯ ಮಾಜಿ ಸದಸ್ಯೆ ಅನುಸೂಯಾ ಉಯಿಕೆ (62) ಅವರನ್ನು ಛತ್ತೀಸ್‌ಘಡದ ರಾಜ್ಯಪಾಲರಾಗಿ ನೇಮಕಗೊಳಿಸಲಾಗಿದೆ.

      2006 ರಿಂದ 2012 ರವರೆಗೆ ಮಾತೃ ರಾಜ್ಯವಾದ ಮಧ್ಯಪ್ರದೇಶದಿಂದ ರಾಜ್ಯಸಭಾ ಸದಸ್ಯರಾಗಿದ್ದರು.ಪ್ರಸ್ತುತ ಮಧ್ಯಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಛತ್ತೀಸ್‌ಘಡ ರಾಜ್ ಭವನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಇಬ್ಬರು ಹೊಸ ರಾಜ್ಯಪಾಲರ ನೇಮಕಾತಿಗಳು ಆಯಾ ಕಚೇರಿಗಳ ಉಸ್ತುವಾರಿ ವಹಿಸಿಕೊಂಡ ದಿನಾಂಕಗಳಿಂದ ಜಾರಿಗೆ ಬರಲಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link