ನವದೆಹಲಿ
ಮಹಿಳಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಾಧನೆ ಮಾಡಿದ ಹಾಗೂ ಸ್ಫೂರ್ತಿ ನೀಡುವ ಮಹಿಳೆಯರಿಗೆ ಗೌರವ ನೀಡುವ ಕೆಲಸಕ್ಕೆ ಮುಂದಾಗಿದ್ದರು. ಒಂದು ದಿನದ ಮಟ್ಟಿಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯನ್ನು ನಿರ್ವಹಿಸುವ ಅಧಿಕಾರ ನೀಡಿ, ಅವರಿಂದ ಎಷ್ಟೋ ಜನರಿಗೆ ಸ್ಫೂರ್ತಿ ನೀಡುವ ಕೆಲಸ ಆಗಲಿ ಎಂದಿದ್ದರು.
#SheInspiresUs ಹ್ಯಾಶ್ ಟ್ಯಾಗ್ ಮೂಲಕ ಈ ಅಭಿಮಾನ ಶುರು ಆಗಿದ್ದು, ತಾವು ಕಂಡ ಸ್ಫೂರ್ತಿದಾಯಕ ಮಹಿಳೆಯನ್ನು ಅನೇಕರು ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಈ ಹ್ಯಾಶ್ ಟ್ಯಾಗ್ ಬಳಸಿ ಹಂಚಿಕೊಳ್ಳುತ್ತಿದ್ದರು. ಆದರೆ, ಇದೀಗ ಈ ಅಭಿಯಾನವನ್ನು 8 ವರ್ಷದ ಬಾಲಕಿ, ಹೋರಾಟಗಾರ್ತಿ ಕಂಗುಜಂ ವಿರೋಧಿಸಿದ್ದಾರೆ. #She InspiresUs ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕೇವಲ 8 ವರ್ಷದಲ್ಲಿಯೇ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಕಂಗುಜಂ ಮಹಿಳಾ ದಿನಾಚರಣೆಯ ವಿಶೇಷವಾಗಿ ಶುರುವಾದ #SheInspiresUs ವಿರುದ್ಧ ನಿಂತಿದ್ದಾರೆ. ”ಆತ್ಮೀಯ ನರೇಂದ್ರ ಮೋದಿ ಅವರೇ, ನೀವು ನನ್ನ ಮಾತನ್ನು ಆಲಿಸದೇ ಇದ್ದರೆ, ನನ್ನ ಬಗ್ಗೆ ಸಂಭ್ರಮಿಸಬೇಡಿ.” ಎಂದು ಟ್ವೀಟ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ.
ಯಾರು ಈ ಕಂಗುಜಂ??
ಹವಾಮಾನ ಬದಲಾವಣೆಯ ವಿರುದ್ಧದ ಹೋರಾಡಿದ ಕಂಗುಜಂ ಅವರನ್ನು ಭಾರತೀಯ ‘ಗ್ರೆಟಾ’ ಎಂದು ಕರೆಯುತ್ತಾರೆ. ಕಂಗುಜಂ ”#SheInspiresUs ಹ್ಯಾಶ್ ಟ್ಯಾಗ್ ಅಡಿಯಲ್ಲಿ ದೇಶದ ಸ್ಪೂರ್ತಿದಾಯಕ ಮಹಿಳೆಯರ ನಡುವೆ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು. ಅನೇಕ ಬಾರಿ ಯೋಚಿಸಿದ ನಂತರ, ಈ ಗೌರವವನ್ನು ತಿರಸ್ಕರಿಸಲು ನಿರ್ಧರಿಸಿದೆ. ಜೈ ಹಿಂದ್.” ಎಂದು ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








