ದುಬೈ:
ಐಸಿಸಿ ಬುಧವಾರ ಬಿಡುಗಡೆ ಮಾಡಿದ ನೂತನ ಟೆಸ್ಟ್ RANKING ಪಟ್ಟಿ ಪ್ರಕಟಿಸಿದ್ದು,ಈ ಪಟ್ಟಿಯಲ್ಲಿ ಪ್ರತಿವರ್ಷವೂ ಮೊದಲನೆ ಸ್ಥಾನದಲ್ಲಿರುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಈ ವರ್ಷ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಈ ಬಾರಿ ಅಗ್ರಸ್ಥಾನ ಅಲಂಕಿಸಿದ್ದು, 911 ಅಂಕಗಳಿಂದ ಮತ್ತೆ ನಂ.1 ಸ್ಥಾನಕ್ಕೇರಿದ್ದಾರೆ.RANKING ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರು 906 ಪಾಯಿಂಟ್ ಗಳನ್ನು ಹೊಂದಿದ್ದಾರೆ.
ಇತ್ತೀಚಿಗೆ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೇವಲ ಎರಡು ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಎರಡನೇ ಇನಿಂಗ್ಸ್ ನಲ್ಲಿ 19ರನ್ ಗಳಿಸಿ ಔಟ್ ಆಗಿದ್ದರು. ಹೀಗಾಗಿ ರ‍್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.ಇನ್ನು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ (827) ಹಾಗೂ ಪಾಕಿಸ್ತಾನದ ಬಾಬರ್ ಅಜಂ (800) ಇದ್ದಾರೆ.
ಒಟ್ಟಾರೆ ಭಾರತದ ನಾಲ್ವರು ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಸ್ಥಾನ ಮೇಲೇರಿರುವ ಅಜಿಂಕ್ಯ ರಹಾನೆ 8ರಲ್ಲಿ ಇದ್ದಾರೆ. ಎರಡು ಸ್ಥಾನ ಕಳೆದುಕೊಂಡಿರುವ ಟೆಸ್ಟ್ ಪರಿಣತ ಚೇತೇಶ್ವರ ಪೂಜಾರ 9ರಲ್ಲಿ ಕಾಣಿಕೊಂಡಿದ್ದಾರೆ. ಕನ್ನಡಿಗ ಮಯಂಕ್ ಅಗರವಾಲ್ 2 ಸ್ಥಾನ ಮೇಲೇರಿದ್ದು, 10ನೇ ಸ್ಥಾನಪಡೆದಿದ್ದಾರೆ.








