ಬಿಹಾರ : ಹೊಸ ವೇಷ ಧರಿಸಿದ ಲಾಲು ಪುತ್ರ..!!!

ಪಟ್ನಾ :

    ಆರ್.ಜೆ.ಡಿ. ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಅವರು ಬೆಳವಣಿಗೆಯೊಂದರಲ್ಲಿ ಶಿವನ ವೇಷ ಹಾಕುವ ಮೂಲಕ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ.

     ಇತ್ತೀಚೆಗೆ ವಿವಿಧ ಕಾರಣಗಳಿಗೆ ಸುದ್ದಿಯಲ್ಲಿದ್ದ ಲಾಲು ಪುತ್ರ ಈಗ ಹೊಸ ಅವತಾರ ತಾಳಿದ್ದಾರೆ ಅದುವೆ ಹಿಂದೂ ದೇವರುಗಳ ರೀತಿಯಲ್ಲಿ ವೇಷಭೂಷಣವನ್ನು ತೊಟ್ಟು ಮಂದಿರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ ಸುದ್ದಿಯಾಗಿದ್ದಾರೆ.ಈ ಬಾರಿ ತೇಜ್ ಪ್ರತಾಪ್ ಅವರು ಶಿವನ ವೇಷದಲ್ಲಿ ಪಾಟ್ನಾದ ಶಿವನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಇದು ಸಾವನ್ ಮಾಸವಾಗಿದ್ದು ಈ ಸಮಯದಲ್ಲಿ ಉತ್ತರ ಭಾರತದಾದ್ಯಂತ ವಿಶೇಷವಾಗಿ ಶಿವನ ಆರಾಧನೆಯನ್ನು ನಡೆಸಲಾಗುತ್ತದೆ . ಮತ್ತು ಈ ಮಾಸದಲ್ಲಿ ಕನ್ವಾರಿಯಾಗಳು ಗಂಗಾ ನದಿಯಿಂದ ಪವಿತ್ರ ಜಲವನ್ನು ತಂದು ಅದನ್ನು ಶಿವಲಿಂಗಕ್ಕೆ ಅಭಿಷೇಕ ನಡೆಸುತ್ತಾರೆ ಎಂಬ ಪ್ರತೀಥಿ ಇದೆ .

    ಬಿಳಿ ದೋತಿ, ಹುಲಿ ಚರ್ಮದ ವಿನ್ಯಾಸದ ಸೊಂಟ ಪಟ್ಟಿ, ಹಣೆ ಮತ್ತು ಕೈಗಳಿಗೆ ಮೆತ್ತಿದ ವಿಭೂತಿ ಮತ್ತು ಕೊರಳಲ್ಲಿ ರುದ್ರಾಕ್ಷಿ ಮಾಲೆ, ಈ ರೀತಿಯಾಗಿ ತನ್ನನ್ನು ತಾನು ಭಗವಾನ್ ಶಿವನಂತೆ ಅಲಂಕರಿಸಿಕೊಂಡು ತೇಜ್ ಪ್ರತಾಪ್ ಅವರು ದೇವಾಲಯಕ್ಕೆ ಬಂದಿದ್ದರು.

     ಈ ಹಿಂದೆಯೂ ಸಹ ಹಲವಾರು ಬಾರಿ ತೇಜ್ ಪ್ರತಾಪ್ ಅವರು ಹಿಂದೂ ದೇವತೆಗಳ ವೇಷವನ್ನು ಧರಿಸಿಕೊಂಡಿದ್ದರು. 2018ರ ಆಗಸ್ಟ್ 4ರಂದು ತೇಜ್ ಪ್ರತಾಪ್ ಅವರು ಮಹಾದೇವನ ವೇಷದಲ್ಲಿ ಧ್ಯಾನ ಮಾಡುತ್ತಿರುವ ಫೊಟೋವನ್ನು ಟ್ವೀಟ್ ಮಾಡಿದ್ದರು. 2017ರಲ್ಲಿ ಹೊಸ ವರ್ಷದ ಸ್ವಾಗತಕ್ಕಾಗಿ ತೇಜ್ ಪ್ರತಾಪ್ ಅವರು ಕೃಷ್ಣನ ವೇಷವನ್ನು ಧರಿಸಿಕೊಂಡಿದ್ದು ಸುದ್ದಿಯಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ