ಭೋಪಾಲ್:
ದೇಶದಲ್ಲಿ ಸದ್ಯ ತೀವ್ರ ದೊಡ್ಡ ಸಮಸ್ಯೆಯಾಗಿರುವ ಸೈಬರ್ ಕ್ರೈಂ ಅಂದರೆ ಆನ್ ಲೈನ್ ಕಳ್ಳತನದ ಮೂಲ ಪತ್ತೆಯಾಗಿರುವುದು ಮಧ್ಯ ಪ್ರದೇಶದ ಭಿಂದ್ ಜಿಲ್ಲೆಯಲ್ಲಿ ಜನಧನ್ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರು ಮುಂದಿನ ಭವಿಷ್ಯದ ಕನಸನ್ನು ಇಟ್ಟುಕೊಂಡು ತೆರೆದ ಅಕೌಂಟ್ ಗಳನ್ನು ಬಳಸಿಕೊಂಡು ಈ ದುಷ್ಕøತ್ಯ ಎಸಗಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಾತೆ ತೆರೆದ ಈ ನಿರುದ್ಯೋಗಿ ಯುವಕರಿಗೆ ಈ ಕಳ್ಳರು ಖಾತೆಗೆ ಇಂತಿಷ್ಟು ಎಂದು ಬಾಡಿಗೆ ನೀಡಿ ಅವರ ಬ್ಯಾಂಕ್ ನ ದಾಖಲಾತಿಗಳನ್ನು ಅವರ ಸುಪರ್ದಿಗೆ ಪಡೆದು ಆನ್ ಲೈನ್ ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ ಮತ್ತು ಅವರು ನೀಡುತ್ತಿದ್ದ ಬಾಡಿಗೆ ಎಂದರೆ ಒಂದು ಖಾತೆಗೆ ತಿಂಗಳಿಗೆ 1,200 ರಿಂದ 1,300 ರೂಗಳು.
ಇದು ಬೆಳಕಿಗೆ ಬಂದಿದ್ದು ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಖಾತೆಯಿಂದ ಸುಮಾರು 4 ಲಕ್ಷ ರೂ.ಗಳ ತಮಗರಿವಿಲ್ಲದೆ ಡ್ರಾ ಆಗಿದೆ ಎಂದು ದೂರು ನೀಡಿದಾಗ ಅವರು ನೀಡಿದ ಸಾಕ್ಷಿಗಳ ಜಾಡು ಹಿಡಿದು ಹೋದ ಪೊಲೀಸರಿಗೆ ಮಧ್ಯಪ್ರದೇಶದ ಭಿಂದ್ ಮೂಲದ ಖಾತೆಯ ವಿವರಗಳು , ಕದ್ದ 4 ಲಕ್ಷದ ಪೈಕಿ 40,000 ರೂ.ಗಳನ್ನು ಭಿಂದ್‍ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.
ನಂತರದಲ್ಲಿ ಸಿಕ್ಕ ದಾಖಲೆಗಳನ್ನು ಮಧ್ಯಪ್ರದೇಶ ಪೊಲೀಸ್ ಸೈಬರ್ ಸೆಲ್ ನೀಡಿ ತನಿಖೆ ಮುಂದುವರೆಸಿದಾಗ ಬೇಳಕಿಗೆ ಬಂದಿದ್ದೆ ಈ ಸೈಬರ್ ಕಳ್ಲರ ಜಾಲ ನಿರುದ್ಯೋಗಿಗಳು ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳಲ್ಲಿ ತೆರೆದಿರುವ ಸುಮಾರು 23 ಕ್ಕೂ ಹೆಚ್ಚು ಖಾತೆಗಳನ್ನು ಇಟ್ಟುಕೊಂಡು ಸೈಬರ್ ವಂಚನೆಗೆ ಕೈ ಹಾಕಿದ್ದಾರೆ ಎನ್ನಲಾಗಿದೆ.
ಪ್ರಾಥಮಿಕ ತನಿಖೆಯ ಭಾಗವಾಗಿದ್ದ ವಿಚಾರಣೆಗೆ ಒಳಪಡಿಸಿದ 45 ಬ್ಯಾಂಕ್ ಖಾತೆಗಳಲ್ಲಿ ಕೇವಲ ಮೂರರಿಂದ 1 ಕೋಟಿ ರೂ.ಗಳಿಗು ಮಿಗಿಲಾಗಿ ವಹಿವಾಟು ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಹಿರಿಯ ಪೆÇಲೀಸ್ ಅಧಿಕಾರಿ ರುಡಾಲ್ಫ್ ಅಲ್ವಾರೆಸ್ ಹೇಳಿದ್ದಾರೆ.
ಇರುವ ದಾಖಲೆಗಳನ್ನು ಇಟ್ಟುಕೊಂಡು ಸದ್ಯ ದೆಹಲಿಯಲ್ಲಿ ನೌಕರಿ ಮಾಡುತ್ತಿರುವ ಯುವಕನನ್ನು ಸಂಪರ್ಕಿಸಿದಾಗ ತಾನು ಆ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದು ನಿಜ ಆದರೆ ಆ ಖಾತೆಗೆ ಸಂಬಂಧಿಸಿದ ಯಾವುದೇ ದಾಖಲೆಗಳು ತನ್ನ ಬಳಿ ಇಲ್ಲವೆಂದು ಹೇಳಿದ ನಂತರದಲ್ಲಿ ತನಗೆ ಖಾತೆಗೆ ಮೊದಲು ತಿಂಗಳಿಗೆ 1200-1300 ರೂ. ನೀಡಲಾಗುತ್ತಿತ್ತು ಎಂದು ತಿಳಿಸಿದ್ದಾರೆ. ನಂತರದಲ್ಲಿ ನಾವು ಈ ಬಗ್ಗೆ ತನಿಖೆ ಮುಂದುವರೆಸಿ ಖಾತೆ ತೆರೆದ ಬೇರೆ ಯುವಕರನ್ನೂ ವಿಚಾರಿಸಲು ಪ್ರಯತ್ನ ಪಡುತ್ತಿದ್ದೇವೆ. ಮತ್ತು ಖಾತೆಗಳನ್ನು ತೆರೆದ ನಂತರ, ಈ ಜನರು ಬ್ಯಾಂಕಿನಲ್ಲಿ ನೋಂದಾಯಿಸಲಾದ ಫೋನ್ ಸಂಖ್ಯೆಯ ಡೆಬಿಟ್ ಕಾರ್ಡ್‍ಗಳು, ಪಾಸ್‍ಬುಕ್ ಮತ್ತು ಸಿಮ್ ಕಾರ್ಡ್ ಅನ್ನು ವಂಚಕರಿಗೆ ಹಸ್ತಾಂತರಿಸಿದರು ಎಂದು ಮಧ್ಯ ಪ್ರದೇಶ ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
