ಕೋಲ್ಕತ್ತಾ: 

ಎಡ ಪಕ್ಷಗಳು ಕರೆನೀಡಿರುವ ಬಂದ್ ಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆ ನೀಡಿರುವ ಬಂದ್ ವಿರುದ್ಧ ಕೆಂಡಾಮಂಡಲ ವಾಗಿದ್ದಾರೆ ಎಡ ಪಕ್ಷದವರಿಗೆ ಈ ಚಳಿಗಾಲದಲ್ಲೂ ಬೆವರಿಳಿಸಿದ್ದಾರೆ.
ಬಂದ್ ವಿಷಯವಾಗಿ ನಾನು ಏನನ್ನು ಮಾತಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ. ಇಲ್ಲಿಗೆ ಸುಮ್ಮನಾಗದ ಅವರು ಪಶ್ಚಿಮ ಬಂಗಾಳದಲ್ಲಿ ನಮ್ಮ ಸರ್ಕಾರ ಬಂದ್ ಗೆ ನಮ್ಮಿಂದ ಯಾವುದೇ ಬೆಂಬಲ ಇಲ್ಲ ಎಂದು ಹೇಳುವ ಮೂಲಕ ಕಳೆದ 34 ವರ್ಷಗಳಿಂದ ರಾಜ್ಯದಲ್ಲಿ ಎಡಪಕ್ಷಗಳು ಬಂದ್ ಮೇಲೆ ಬಂದ್ ಗೆ ಕರೆ ನೀಡಿ ರಾಜ್ಯವನ್ನು ಹಾಳುಮಾಡಿವೆ ಎಂದು ಎಡ ಪಕ್ಷಗಲ ಮೇಲೆ ಟೀಕಾ ಪ್ರಹಾರ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
