ನವದೆಹಲಿ:

ಸದ್ಯ ಇಡೀದೇಶಾದ್ಯಂತ ಪ್ರಚಾರ ಕಾರ್ಯ ಆರಂಭಿಸಿರುವ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ತಡೆ ಉಂಟಾಗಲಿದೇ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಅಮಿತ್ ಶಾ ಅವರು ನಮ್ಮ ರಥಯಾತ್ರೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕಠಿಣವಾಗಿ ನುಡಿದಿದ್ದಾರೆ.
“ರಥ ಯಾತ್ರೆಗಳಂತಹ ಪ್ರಜಾಪ್ರಭುತ್ವದ ಸಾಮಾನ್ಯ ಪ್ರಕ್ರಿಯೆಯನ್ನು ತಮ್ಮದೇ ಸರ್ವಾಧಿಕಾರದ ನಶೆಯಲ್ಲಿರುವಂತಹ ಮಮತಾ ಬ್ಯಾನರ್ಜಿ ಅವರು ಹತ್ತಿಕ್ಕುತ್ತಿಕಲು ಯತ್ನಿಸುತ್ತಿದ್ದಾರೆ .ಬ್ಯಾನರ್ಜಿಯವರು ರಥಯಾತ್ರೆ ತಡೆಯುವ ಮೂಲಕ ಹೊಸ ಟ್ರೆಂಡ್ ಪ್ರಜಾಪ್ರಭುತ್ವದ ಸೃಷ್ಠಿಕರ್ತರಾಗಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದಲ್ಲಿ ಬಿಜೆಪಿ ರಥಯಾತ್ರೆ ನಡೆಸಲು ಉದ್ದೇಶಿಸಿದ್ದು, ಇದಕ್ಕೆ ಅಲ್ಲಿನ ಹೈಕೋರ್ಟ್ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
