ನವದೆಹಲಿ
ಪ್ರಸಕ್ತ ಸಾಲಿನ ಐತಿಹಾಸಿಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಮೊದಲ ತಂಡದ ಪ್ರಯಾಣಕ್ಕೆ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಚಾಲನೆ ನೀಡಿದರು.
ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಅವರು, ಮೊದಲ ತಂಡದ ಕೈಲಾಸ ಮಾನಸ ಸರೋವರ ಯಾತ್ರೆಗೆ ಚಾಲನೆ ನೀಡಿದರು. ಮೊದಲ ಗುಂಪಿನಲ್ಲಿ ಇಬ್ಬರು ಸಂಪರ್ಕಾಧಿಕಾರಿಗಳು ಹಾಗೂ 58 ಯಾತ್ರಿಕರಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಯಾತ್ರಿಕರಿಗೆ ಸಚಿವರು ಸುರಕ್ಷತೆಯಿಂದ ಯಾತ್ರೆಯನ್ನು ಪೂರೈಸಿ ಹಿಂತಿರುಗುವಂತೆ ಹಾಗೂ ಪ್ರಯಾಣ ಸುಖಕರವಾಗಿರುವಂತೆ ಹಾರೈಸಿದ್ದಾರೆ. ವಿದೇಶಾಂಗ ಸಚಿವರು ವಿವಿಧ ಸಚಿವಾಲಯಗಳು, ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಉತ್ತರ ಖಂಡದ ರಾಜ್ಯ ಸರ್ಕಾರ, ಸಿಕ್ಕಿಂ ಮತ್ತು ದೆಹಲಿ ಯಾತ್ರೆಯನ್ನು ಆಯೋಜಿಸುವಲ್ಲಿ ಇವರೆಲ್ಲರ ಪಾತ್ರ ಪ್ರಮುಖವಾದುದು ಎಂದು ಅವರು ತಿಳಿಸಿದರು.
ಕೈಲಾಸ ಯಾತ್ರೆಗೆ ಚೀನಾ ಸರ್ಕಾರ ಬಾಹ್ಯ ಸಹಕಾರ ನೀಡಲು ಮುಂದಾಗಿದ್ದು, ಎರಡು ದೇಶಗಳ ನಡುವಿನ ಸೌಹಾರ್ಧಯುತ ಸಂಬಂಧವನ್ನು ವೃದ್ಧಿಸಲು ಇದು ಸಹಕಾರಿಯಾಗಲಿದೆ. ಹಾಗೂ ಇತ್ತೀಚಿನ ವರ್ಷಗಳಲ್ಲಿ ಜನರಲ್ಲಿ ತೀರ್ಥಯಾತ್ರೆಯ ಆಸಕ್ತಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಭಾರತ ಮತ್ತು ಚೀನಾ ರಾಯಭಾರಿ ಜೈ ಶಂಕರ್ ವಿವರಿಸಿದರು.