ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಧರಿಸುವುದು ಕಡ್ಡಾಯ: ಬಿಎಂಸಿ

ಮುಂಬೈ:

     ಮುಂಬೈನಲ್ಲಿ ಮಹಾಮಾರಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಬುಧವಾರ ಆದೇಶ ಹೊರಡಿಸಿದೆ.

    ನಗರ ಪಾಲಿಕೆ ಆದೇಶ ಉಲ್ಲಂಘಿಸಿ ಮಾಸ್ಕ್ ಧರಿಸದೆ ಮನೆಯಿಂದ ಹೊರಗೆ ಬರುವವರನ್ನು ಐಪಿಸಿ ಸೆಕ್ಷನ್ 188 ಅಡಿ ಬಂಧಿಸಲಾಗುವುದು ಎಂದು ಬಿಎಂಸಿ ಅಧಿಸೂಚನೆ ಹೊರಡಿಸಿದೆ.ಅಗತ್ಯ ವಸ್ತುಗಳಿಗಾಗಿ, ಆಸ್ಪತ್ರೆ, ಕಚೇರಿ ಹಾಗೂ ಇತರೆ ಯಾವುದೇ ಕಾರಣಕ್ಕೆ ರಸ್ತೆಗೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೂಚಿಸಲಾಗಿದೆ.

    ಮಹಾರಾಷ್ಟ್ರ ಸಾವಿರಕ್ಕೂ ಅಧಿಕ ಕೊರೋನಾ ಕೇಸ್ ಹೊಂದಿದ ಮೊದಲ ರಾಜ್ಯವೆಂಬ ಕುಖ್ಯಾತಿ ಪಡೆದಿದ್ದು, ಮುಂಬೈ ಒಂದರಲ್ಲೇ 116 ಪಾಸಿಟಿವ್ ಕೇಸುಗಳು ದೃಢಪಟ್ಟಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap