ಅಹಮದಾಬಾದ್
ದೇಶದ ಕರಾವಳಿ ಪ್ರದೇಶದಕ್ಕೆ ಯಮಸ್ವರೂಪಿಯಾದ ವಾಯು ಚಂಡಮಾರುತ ತಾತ್ಕಾಲಿಕವಾಗಿ ತನ್ನ ಮಾರ್ಗವನ್ನು ಬದಲಿಸಿಕೊಂಡಿದ್ದು ಮತ್ತೆ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಹೇಳಲಾಗಿದೆ “ವಾಯು” ಚಂಡಮಾರುತವು ಬುಧವಾರ ರಾತ್ರೋರಾತ್ರಿ ಪಥ ಬದಲಿಸಿದ್ದು, ಚಂಡಮಾರುತವು ಜೂನ್ 17-18ರಂದು ಕಛ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಾಯು ಚಂಡ ಮಾರುತ ದಿಢೀರ್ ದಿಕ್ಕು ಬದಲಿಸಿದ್ದರಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆರವುಗೊಳಿಸಿದ ಬೆನ್ನಲ್ಲೇ ವಾಯು ಚಂಡಮಾರುತ ಜೂನ್ 16ರಂದು ಮತ್ತೆ ಅಬ್ಬರಿಸಲಿದ್ದು, 17,18ರಂದು ಕಛ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ತಿಳಿಸಿದ್ದಾರೆ.
ಗಿರ್-ಸೋಮನಾಥ, ಜುನಾಗಡ, ಪೋರಬಂದರ್, ದೇವ ಭೂಮಿ- ದ್ವಾರಕಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಡಿಯು ಚಂಡಮಾರುತದ ಪ್ರಭಾವಕ್ಕೆ ಸಿಲುಕಲಿವೆ. ಅಲ್ಲದೆ, ಈ ಭಾಗಗಳಲ್ಲಿ ಗಂಟೆಗೆ 155- 165 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಶುಕ್ರವಾರದವರೆಗೂ ಹೈ ಅಲರ್ಟ್ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.