ನವದೆಹಲಿ:
ಆಪ್ ಅಧ್ಯಕ್ಷ ಹಾಗು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸದಾ ಮೋದಿಯನ್ನು ಟೀಕಿಸುತ್ತಾ ಇರುವುದು ಸಾರ್ವಕಾಲಿಕ ಸತ್ಯ ಆದರೆ ಆಮ್ ಆದ್ಮಿ ಪಾರ್ಟಿಯಲ್ಲೇ ಭಿನ್ನಮನಸ್ತತ್ವ ಸ್ಪೋಟಗೊಂಡಿದೆ ಆಪ್ ನ ಹಾಲಿ ಶಾಸಕ ಹಾಗೂ ಮಾಜಿ ಸಚಿವ ಕಪಿಲ್ ಮಿಶ್ರಾ ಅವರು ಮೋದಿಯನ್ನು ಬೆಂಬಲಿಸುವ ಮೂಲಕ ಹೊಸ ಅಭಿಯಾನ ಶುರು ಮಾಡಿರುವುದು ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ .
दिल्ली और उसके आसपास रहने वाले सभी भाई बंधुओ से निवेदन है कि #मेरा_PM_मेरा_अभिमान से जुडने के लिये आज 11नवम्बर को दोपहर 3 बजे ज्यादा से ज्यादा संख्या में इंडिया गेट पहुंचकर @KapilMishra_IND का समर्थन करे और प्रधानमंत्री का अपमान करने वालो को सबक सिखाये
— आलोक तिवारी (@AlokTiwari9335) November 11, 2018
ಕಪಿಲ್ ಮಿಶ್ರಾ ಅವರು ನನ್ನ ಪ್ರಧಾನಿ ನನ್ನ ಹೆಮ್ಮೆ ಎಂಬ ಅಭಿಯಾನವನ್ನು ಇಂದು ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಾರಂಭಿಸುವುದಾಗಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಕಪಿಲ್ ಮಿಶ್ರಾ ತಮ್ಮ ಅಭಿಯಾನಕ್ಕೆ ದೇಶದ ಜನತೆ ಸಹಕಾರ ನೀಡಬೇಕೆಂದು ಕೋರಿದ್ದಾರೆ ಎಂದು ಮೂಲಗಳುತಿಳಿಸಿವೆ.