ಭೋಪಾಲ್:
ರಾಜ್ಯದಲ್ಲಿ ಅಂಗನವಾಡಿಗೆ ಹೋಗುವ ಮಕ್ಕಳ ಮಧ್ಯಾಹ್ನದ ಬಿಸಿಯೂಟವು ಶೌಚಾಲಯದ ಕೋಣೆಯಲ್ಲಿ ತಯಾರಾಗುತ್ತದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಶಿವಪುರಿ ಜಿಲ್ಲೆಯ ಅಂಗನವಾಡಿ ಕೇಂದ್ರದಲ್ಲಿ ಈ ದುಸ್ಥಿತಿಯ ಇದೆ .ಶಿಶು ಆರೋಗ್ಯದ ಮಾನದಂಡಗಳನ್ನು ಗಾಳಿ ತೂರಲಾಗಿದೆ ಅಧಿಕಾರಿಗಳನ್ನು ಕೇಳಿದರೆ ಸ್ಥಳದ ಕೊರತೆಯಿದೆ ಎಂದು ನೆಪ ಹೇಳಿ ಶೌಚಾಲಯದ ಆವರಣದಲ್ಲೇ ಮಕ್ಕಳ ಬಿಸಿಯೂಟ ತಯಾರಿಸುತ್ತಿದ್ದಾರೆ.
ಕರೇರಾ ಎಂಬಲ್ಲಿನ ಅಂಗನವಾಡಿ ಮಕ್ಕಳಿಗೆ ಬಿಸಿಯೂಟಕ್ಕಾಗಿ ಆಹಾರ ತಯಾರಿಸಲು ಸ್ಥಳಾವಕಾಶದ ಕೊರತೆ ಇದೆ. ಇದರಿಂದಾಗಿ ಅಲ್ಲಿನ ಶೌಚಾಲಯವನ್ನೇ ತಾತ್ಕಾಲಿಕ ಅಡಿಗೆಮನೆಯಾಗಿ ಬದಲಿಸಿಕೊಳ್ಲಲಾಗಿದೆ.ಇನ್ನೂ ಆಘಾತಕಾರಿ ಅಂಶವೆಂದರೆ ಶೌಚಾಲಯದಲ್ಲೇ ನೀರು ಬಳಸಿ ಆಹಾರ ಬೇಯಿಸಲಾಗುತ್ತಿದ್ದು ಇದೇ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ.
“ನಮಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಶೌಚಾಲಯದ ಹೊರತು ಬೇರಾವ ಸ್ಥಳವಿಲ್ಲ” ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿ ಹೇಳುತ್ತಾರೆ.