ನವದೆಹಲಿ:
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದ್ದಾರೆ ಎಂದು ರಾಜ್ಯ ಸಚಿವಾಲಯದ ಮೂಲಗಳು ಖಚಿತಪಡಿಸಿವೆ.
ಸದ್ಯ ಪ.ಬಂಗಾಳದಲ್ಲಿ ತಾರಕಕ್ಕೇರಿರುವ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಆಡಳಿತಾರೂಡ ತೃಣಮೂಲ ಕಾಂಗ್ರೆಸ್ ನ ಹಲವಾರು ನಾಯಕರು, ಕೋಲ್ಕತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಸೇರಿದಂತೆ ಹಲವಾರು ಮುಖಂಡರಿಗೆ ಸಿಬಿಐ ನೋಟೀಸ್ ನೀಡಿರುವ ಸಂದರ್ಭದ ಈ ಸಭೆ ಭಾರಿ ಕುತೂಹಲಕ್ಕೆ ಕೆರಳಿಸಿದೆ.
ಕಳೆದ ವಾರ ಪ.ಬಂಗಾಳ ಮುಖ್ಯಮಂತ್ರಿ ಕಛೇರಿಯಿಂದ ಪ್ರಧಾನ ಮಂತ್ರಿ ಕಛೇರಿಗೆ ಸಮಯಾವಕಾಶಕ್ಕಾಗಿ ಬಂದ ಅಹವಾಲಿನ ಅನ್ವಯ ಪ್ರಧಾನಿ ಕಛೇರಿ ಸಭೆ ಸಮಯವನ್ನು ಬುಧವಾರಕ್ಕೆ ನಿಗದಿ ಮಾಡಿದೆ ಎಂದು ತಿಳಿದು ಬಂದಿದೆ.
ಶಾರದಾ ಚಿಟ್ ಫಂಡ್ ಹಗರಣದಲ್ಲಿ ಲಕ್ಷಾಂತರ ಜನರ 2,500 ಕೋಟಿ ರೂ.ಗಳ ಬೃಹತ್ ವಂಚನೆ ಪ್ರಕರಣದ ಸಂಬಂಧ ರಾಜೀವ್ ಕುಮಾರ್ ಅವರನ್ನು ಇಂದು ಮಧ್ಯಾಹ್ನ 2 ಗಂಟೆಯೊಳಗೆ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಹೇಳಿದರು ಅವರು ಹಾಜರಾಗುವಲ್ಲಿ ವಿಫಲವಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
