ನವದೆಹಲಿ:
ರಫೇಲ್ ಒಪ್ಪಂದದ ವಿಷಯ ಎತ್ತುವ ಮುನ್ನ ಪ್ರತಿಪಕ್ಷ ನಾಯಕರು ಕಾಮನ್ ಸೆನ್ಸ್ ಬಳಸಬೇಕು . ಮನಬಂದಂತೆ ಮಾತನಾಡಬಾರದು ಎಂದು ಮೋದಿ ಅವರು ವಿಪಕ್ಷ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ನಾನು ಹೇಳಿದ್ದೇನೆಂದರೆ ನಮ್ಮ ವಾಯುಪಡೆ ಬಳಿ ರಫೇಲ್ ಜೆಟ್ ಇದ್ದಿದ್ದರೇ, ಶತ್ರುಗಳ ಮೇಲೆ ನಡೆದ ದಾಳಿಯಲ್ಲಿ ನಾವು ಒಂದೇಒಂದು ಜೆಟ್ ಅನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು. ಹಾಗೆಯೇ ಉಗ್ರರು ಉಳಿಯಲು ಬಿಡುತ್ತಿರಲಿಲ್ಲ ಅಂತ. ಆದ್ರೆ ವಿರೋಧ ಪಕ್ಷಗಳು ನನ್ನ ಹೇಳಿಕೆಯನ್ನು ಅಪಾರ್ಥ ಮಾಡಿಕೊಂಡು ಸುಮ್ಮನೆ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಇನ್ಮುಂದೆ ರಫೇಲ್ ಬಗ್ಗೆ ಮಾತನಾಡುವ ಮುನ್ನ ದಯವಿಟ್ಟು ಸ್ವಲ್ಪ ಕಾಮನ್ ಸೆನ್ಸ್ ಬಳಸಿ ಎಂದು ತಿರುಗೇಟು ನೀಡಿದ್ದಾರೆ.
ನಾವು ನಮ್ಮ ಸೇನೆಯನ್ನು ನಂಬಿ ಅದರ ಬಗ್ಗೆ ಹೆಮ್ಮೆ ಪಡುವುದು ಸಹಜ. ಆದರೆ ಕೆಲವರು ನಮ್ಮ ಸೇನೆಯನ್ನೆ ಶಂಕಿಸಿ ಮಾತನಾಡುತ್ತಿದ್ದಾರೆ. ಹಾಗೆಯೆ ಉಗ್ರರು ಹಾಗೂ ಭಯೋತ್ಪಾದನೆಯನ್ನು ಮಟ್ಟಹಾಕಲು ಭಾರತ ಪ್ರಯತ್ನಿಸುತ್ತಿದೆ. ಅದನ್ನು ಹೇಗೆ ಮಾಡಬೇಕು ಅಂತ ಯೋಚಿಸುತ್ತಿದೆ. ಭಯೋತ್ಪಾದನೆ ವಿಚಾರದಲ್ಲಿ ಭಾರತ ಸುಮ್ಮನೆ ಕೂರಲ್ಲ. ಭಯೋತ್ಪಾದನೆಯನ್ನು ಬುಡದಿಂದ ಕಿತ್ತೆಸೆಯುವ ಕೆಲಸ ನಾವು ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
