16504 ಕೋಟಿ ರೂ. ವೆಚ್ಚದ ಐಆರ್‌ಇಪಿ ಗೆ ಶಿಲಾನ್ಯಾಸ ನೆರವೇರಿಸಿದ ಮೋದಿ…!!!

ಕೊಚ್ಚಿ.

          ಭಾನುವಾರ ನರೇಂದ್ರ ಮೋದಿ, 16504 ಕೋಟಿ ರೂ. ವೆಚ್ಚದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ನ ಸಮಗ್ರ ಪೆಟ್ರೋಲಿಯಂ ಸಂಸ್ಕರಣಾ ಯೋಜನೆ(ಐಆರ್‌ಇಪಿ) ಮತ್ತು ಪೆಟ್ರೋಕೆಮಿಕಲ್ ಸಂಕೀರ್ಣಕ್ಕೆ ಶಿಲಾನ್ಯಾಸ ನೆರವೇರಿಸಿದರು.

           ಈ ಯೋಜನೆಯೊಂದಿಗೆ ಕೊಚ್ಚಿ ತೈಲ ಸಂಸ್ಕರಣ ಘಟಕ, ವಿಶ್ವ ದರ್ಜೆಯ ಪೆಟ್ರೋಲಿಯಂ ಸಂಸ್ಕರಣಾ ಘಟಕವಾಗಲಿದ್ದು, 15.5 ದಶಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಸಂಗ್ರಹಣೆ ಸಾಮರ್ಥ್ಯ ಹೊಂದಲಿದೆ. ಜೊತೆಗೆ ದೇಶದಲ್ಲಿ ಕೊಚ್ಚಿ ರಿಫೈನರಿ ಸಾರ್ವಜನಿಕ ವಲಯದ ಬೃಹತ್ ಘಟಕ ಎನಿಸಿಕೊಳ್ಳಲಿದೆ.

          ಇಡೀ ಕೇರಳಕ್ಕೆ ಇದೊಂದು ಅತಿ ದೊಡ್ಡ ಹೂಡಿಕೆಯಾಗಿದ್ದು, ಸಾಕಷ್ಟು ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ. ಯೋಜನೆ ನಿರ್ಮಾಣದ ವೇಳೆ ೨೦ ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದ್ದು, ಘಟಕ ಕಾರ್ಯಾರಂಭದ ಬಳಿಕ ೫೦೦ ಜನರಿಗೆ ಉದ್ಯೋಗ ಲಭಿಸಲಿದೆ.  ಕೇರಳ ರಾಜ್ಯಪಾಲ ಪಿ.ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್ ಮೊದಲಾದ ಗಣ್ಯರು ಸಮಾರಂಭದಲ್ಲಿ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap