ಮೋದಿ ಅವರು ಮಾನಸಿಕ ವಿಭ್ರಮಣೆಯಿಂದ ಬಳಲುತ್ತಿದ್ದಾರೆ : ನಾರಾಯಣ ರೆಡ್ಡಿ

ಹೈದರಾಬಾದ್modi

      ಪ್ರಧಾನಿ ನರೇಂದ್ರ ಅವರು ಮಾನಸಿಕ ವಿಭ್ರಮಣೆಯಿಂದ ಬಳಲುತ್ತಿದ್ದಾರೆ ಎಂದು ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ (ಟಿಪಿಸಿಸಿ) ಶುಕ್ರವಾರ ಆರೋಪಿಸಿದೆ.

       ಮೋದಿ ಅವರು ಯಾವಾಗಲೂ ಅನಾರೋಗ್ಯಕರ ಚಿಂತನೆ, ಕಾರ್ಯಚಟುವಟಿಕೆ ಹಾಗೂ ವರ್ತನೆಯನ್ನು ತೋರಿದ್ದಾರೆ. ಅವರು ಮೂರು ಅವಧಿಗೆ ಗುಜರಾತ್ ನ ಮುಖ್ಯಮಂತ್ರಿಯಾಗಿದ್ದರೂ, ತಮ್ಮನ್ನು ತಾವು ಬಾಲ್ಯದಿಂದ ತೊಡಗಿಸಿಕೊಂಡಿದ್ದೆ ಎನ್ನಲಾದ ಟೀ ಮಾರುವ ಉದ್ಯೋಗಕ್ಕೆ ಹೋಲಿಸಿಕೊಂಡು ‘ಚಾಯ್ ವಾಲ ‘ ಎಂದು ಕರೆದುಕೊಂಡು ಸಂತಸಪಡುತ್ತಿದ್ದಾರೆ. ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುವ ಬದಲು, ತಮ್ಮನ್ನು ಚೌಕಿದಾರ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

        ಅವರ ಭಾಷಣಗಳಲ್ಲಿ ಬೇರೆಯವರ ಮೇಲೆ ಅಪನಂಬಿಕೆ ಹಾಗೂ ಇತರರ ಉದ್ದೇಶಗಳ ಕುರಿತ ಶಂಕೆ ಸ್ಪಷ್ಟವಾಗಿ ಗೋಚರವಾಗುತ್ತದೆ. ಇವುಗಳನ್ನು ಗಮನಿಸಿದರೆ ಅವರು ಮಾನಸಿಕ ವಿಭ್ರಮಣೆಯ ವ್ಯಕ್ತಿತ್ವ ಸಮಸ್ಯೆಯಿಂದ ಬಳಲುತ್ತಿರುವುದು ಸ್ಪಷ್ಟವಾಗುತ್ತದೆ ಎಂದು ಟಿಪಿಸಿಸಿ ಖಜಾಂಚಿ ಗುಡೂರ್ ನಾರಾಯಣ ರೆಡ್ಡಿ ಟೀಕಿಸಿದ್ದಾರೆ.

        ಇಂತಹ ವ್ಯಕ್ತಿಗಳಿಗೆ ತಮ್ಮ ಆಲೋಚನೆ ಹಾಗೂ ವರ್ತನೆ ಸಹಜವಾಗಿ ಕಾಣುವುದರಿಂದ ಅವರಿಗೆ ತಮಗೆ ವ್ಯಕ್ತಿತ್ವದ ಸಮಸ್ಯೆಯಿರುವುದು ತಿಳಿಯುವುದಿಲ್ಲ. ಮೋದಿ ಅವರ ವಿಷಯದಲ್ಲಿ ಕೂಡ ಇದೇ ಆಗಿದೆ. ಪ್ರಧಾನಿ ಮೋದಿ ತಕ್ಷಣ ತಮ್ಮ ವರ್ತನೆ ಹಾಗೂ ಭಾಷಣದ ಅತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.

         ಒಂದೊಮ್ಮೆ ಮೋದಿಗೆ ಮಾನಸಿಕ ಆರೋಗ್ಯದ ಸಮಸ್ಯೆ ಇಲ್ಲದಿದ್ದರೆ, ಅವರು ಸಂಪೂರ್ಣ ದೇಶವನ್ನು ತಮ್ಮ ವಿಭಜನೆಯ ರಾಜಕೀಯದಿಂದ ಉದ್ದೇಶಪೂರ್ವಕವಾಗಿ ವಂಚಿಸುತ್ತಿದ್ದಾರೆ. ‘ಚೌಕಿದಾರ್ ಚೋರ್ ಹೈ’ ಘೋಷಣೆಗೆ ಭಾರಿ ಪ್ರತಿಕ್ರಿಯೆ ಬರುತ್ತಿದ್ದಂತೆಯೇ, ಅದರಿಂದ ಪಾರಾಗಲೂ ಮೋದಿ ಅವರು ಜಾತಿ ರಾಜಕಾರಣ ಆರಂಭಿಸಿದ್ದಾರೆ.

       ತಮ್ಮನ್ನು ‘ಪಿಚ್ಡ’ (ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿ ) ಎಂದು ಕರೆದುಕೊಳ್ಳುತ್ತಿದ್ದಾರೆ. ಇದು ಹಾಸ್ಯಾಸ್ಪದ. ಜೊತೆಗೆ, ತಮ್ಮ ಭಾಷಣದಲ್ಲಿ ‘ಸ್ಮಶಾನ ‘ ಹಾಗೂ ‘ಖಬರಿಸ್ತಾನ’ ಪದಗಳನ್ನು ಹಲವು ಬಾರಿ ಬಳಸುವ ಮೂಲಕ ಜನರನ್ನು ವಿಂಗಡಿಸಲು ಯತ್ನಿಸುತ್ತಿದ್ದಾರೆ. ಕೇರಳದ ವೈನಾಡನ್ನು ‘ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ನಾಡು’ ಎಂದು ಬಣ್ಣಿಸಿದ್ದಾರೆ ಎಂದು ಆರೋಪಿಸಿದರು.

       ಮೋದಿ ಅವರು ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ, ಯಾವುದೋ ಒಂದು ಸಮುದಾಯವನ್ನಲ್ಲ ಎಂದ ರೆಡ್ಡಿ, ಮೋದಿ ಅವರು ಸಂದರ್ಭಕ್ಕೆ ತಕ್ಕಂತೆ ಧರಿಸಲು ಮುಖವಾಡಗಳ ಕಂತೆಯನ್ನೇ ಕೊಂಡೊಯ್ಯುತ್ತಾರೆ ಎಂದು ಆರೋಪಿಸಿದರು.
ಮೋದಿ ಅವರು ರಫೇಲ್‍ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತ ಪ್ರಶ್ನೆಗಳಿಂದ ಬಚಾವಾಗಲು ಸಾವಿರಾರು ಮಾರ್ಗಗಳನ್ನು ಹುಡುಕುತ್ತಿದ್ದಾರೆ.

        ಕಾಂಗ್ರೆಸ್‍ ಅಧ್ಯಕ್ಷ ರಾಹುಲ್‍ ಗಾಂಧಿ ಅವರು ವಿಮಾನ ಖರೀದಿಯ ದರದ ಕುರಿತು ಕೇಳಿದ ಒಂದು ನೇರ ಪ್ರಶ್ನೆಗೆ ಉತ್ತರಿಸಲು ಅವರಿಗೆ ಸಾಧ‍್ಯವಾಗಲಿಲ್ಲ. ಎಚ್ ಎಎಲ್ ಸಂಸ್ಥೆಗೆ ದೊರೆಯಬೇಕಿದ್ದ ಗುತ್ತಿಗೆಯನ್ನು ತಡೆದು ಉದ್ಯಮಿ ಅನಿಲ್‍ ಅಂಬಾನಿ ಅವರ ಹೊಸ ಸಂಸ್ಥೆಗೆ ಗುತ್ತಿಗೆ ನನೀಡಿ 30 ಸಾವಿರ ಕೋಟಿ ರೂ. ಲಾಭ ಒದಗಿಸಿದ ಪ್ರಶ್ನೆಗೆ ಕೂಡ ಅವರ ಬಳಿ ಉತ್ತರವಿಲ್ಲ. ತಮ್ಮ ವಿರುದ್ಧದ ಹಗರಣಗಳಿಂದ ಪಾರಾಗಲು ಮೋದಿ ಅವರು ರಾಜಕೀಯ ಎದುರಾಳಿಗಳನ್ನು ದೇಶ ವಿರೋಧಿಗಳು ಎಂದು ಬಿಂಬಿಸುತ್ತಿರುವುದು ದುರದೃಷ್ಟಕರ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link