ಶಾಸ್ತ್ರಿ ಭವನದಲ್ಲಿ ಬೆಂಕಿ : ಮೋದಿಯವರೆ ಕಾರಣ ಎಂದ ರಾಹುಲ್..!!!

ನವದೆಹಲಿ

      ದೆಹಲಿಯ ಶಾಸ್ತ್ರಿ ಭವನದಲ್ಲಿ ನಿನ್ನೆ ಮಧ್ಯಾಹ್ನ ಆದ ಬೆಂಕಿ ಅನಾಹುತಕ್ಕೆ ನರೇಂದ್ರ ಮೋದಿಯವರೇ ಕಾರಣ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

     ಮೋದಿಯವರೆ ನೀವು ಕಡತಗಳನ್ನು ವ್ಯವಸ್ಥಿತವಾಗಿ ಸುಟ್ಟು ಹಾಕಿದರೆ ನೀವು ಸುರಕ್ಷಿತರಾದಿರಿ ಎಂದು ಕೊಳ್ಳಬೇಡಿ ನಿಮ್ಮ ತಪ್ಪುಗಳಿಗೆ ಬೆಲೆ ತರುವ ದಿನ ಹತ್ತಿರದಲ್ಲೇ ಇದೇ  ಎಂದು ಟ್ವೀಟ್ ಮಾಡಿದ್ದಾರೆ.

     ಇನ್ನೇನು ಅಧಿಕಾರದಿಂದ ಕೆಳಗೆ ಇಳಿಯುವ ದಿನಗಳು ಹತ್ತಿರ ಬರುತ್ತಿದೆ ಎಂಬ ರಾಹುಲ್ ಗಾಂಧಿ ಟ್ವೀಟಿಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಇದೇ ಶಾಸ್ತ್ರಿ ಭವನದಲ್ಲಿ ನಡೆದ ಬೆಂಕಿ ಅವಘಡವನ್ನು ಟ್ವಿಟ್ಟಿಗರು ಎಳೆದು ತಂದಿದ್ದಾರೆ.

      ರಾಹುಲ್ ಗಾಂಧಿ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಬೆಂಕಿ ಅನಾಹುತದಲ್ಲಿ, ಮೇಲಿನ ಮಹಡಿಯಲ್ಲಿ ಇಟ್ಟಿದ್ದ ಬೇಡದ ವಸ್ತುಗಳಿಗೆ ಬೆಂಕಿ ತಗುಲಿತ್ತು. ಅದನ್ನು ಕೇವಲ 30 ನಿಮಿಷದೊಳಗೆ ಅಗ್ನಿಶಾಮಕ ದಳ ನಂದಿಸಿದೆ, ಯಾವುದೇ ಕಡತಗಳಿಗೆ ಹಾನಿಯಾಗಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

     ದೆಹಲಿಯ ಪ್ರಮುಖ ಸಚಿವಾಲಯಗಳಿರುವ ಶಾಸ್ತ್ರಿ ಭವನದಲ್ಲಿ ಮಂಗಳವಾರ  ಬೆಂಕಿ ಅವಘಡ ಸಂಭವಿಸಿತ್ತು. ಮಧ್ಯಾಹ್ನ 1.45ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿ 7 ವಾಹನಗಳನ್ನು ಬಳಸಿಕೊಂಡು ಪರಿಸ್ಥಿತಿಯನ್ನು ನಲವತ್ತು ನಿಮಿಷದಲ್ಲಿ ಹತೋಟಿಗೆ ತಂದಿದ್ದರು. ಕಾರ್ಪೊರೇಟ್ ವ್ಯವಹಾರಗಳು, ಮಾಹಿತಿ ಮತ್ತು ಪ್ರಸಾರ, ಕಾನೂನು ಸಚಿವಾಲಯ, ರಾಸಾಯನಿಕ ಮತ್ತು ಪೆಟ್ರೋ ಕೆಮಿಕಲ್ಸ್, ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿಗಳ ಸಚಿವಾಲಯಗಳು ಶಾಸ್ತ್ರಿ ಭವನದಲ್ಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap