ನವದೆಹಲಿ
ಭಾರತದ ಪ್ರಧಾನಿ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಐಎಎಸ್ ಅಧಿಕಾರಿ ಶ್ರೀ ನೃಪೇಂದ್ರ ಮಿಶ್ರಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಸದ್ಯ ನೃಪೇಂದ್ರ ಮಿಶ್ರಾ ಅವರು ವೈಯಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದು, ಮಿಶ್ರಾ ಅವರ ಸ್ಥಾನವನ್ನು ಐಎಎಸ್ ಅಧಿಕಾರಿ ಪಿ.ಕೆ ಸಿನ್ಹಾ ತುಂಬಲಿದ್ದಾರೆ ಎಂದು ಕಾರ್ಯಾಲಯ ತಿಳಿಸಿದೆ.ಇನ್ನು ಮಿಶ್ರಾ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ‘ನೃಪೇಂದ್ರ ಮಿಶ್ರಾ ಅತ್ಯುತ್ತಮ ಅಧಿಕಾರಿಯಾಗಿದ್ದರು, 2014ರಲ್ಲಿ ನಾನು ದೆಹಲಿಗೆ ಬಂದಾಗ ಇಲ್ಲಿನ ರೀತಿ ರಿವಾಜುಗಳನ್ನು ಹೇಳಿಕೊಟ್ಟಿದ್ದರು. ಅವರ ಮಾರ್ಗದರ್ಶನ ನನಗೆ ಮೌಲ್ಯಯುತವಾಗಿದೆ ಮತ್ತು ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.ಮತ್ತು ಮೋದಿಯವರು ಮಿಶ್ರಾ ಅವರನ್ನು ಇನ್ನು ಎರಡು ವಾರ ಅಧಿಕಾರದಲ್ಲಿ ಮುಂದುವರೆಯುವಂತೆ ಕೋರಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ