ನವದೆಹಲಿ :
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣಕಾಸು ನೀತಿ ಸಭೆಯು ಕೆಲವೇ ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ ಈ ಮುಂಚೆ ಅಕ್ಟೋಬರ್ 1ನೇ ತಾರೀಕಿನಂದು ನಿಗದಿಯಾಗಿದ್ದ ಸಭೆಯನ್ನು ಮುಂದೂಡಲಾಗಿತ್ತು. ಹೊಸದಾಗಿ ಆಯ್ಕೆಯಾದ ಸದಸ್ಯರ ಬಗ್ಗೆ ಭದ್ರತೆ ಹಾಗೂ ಹಿನ್ನೆಲೆಯ ಪರಿಶೀಲನೆ ಪ್ರಕ್ರಿಯೆ ಬಾಕಿ ಇತ್ತು ಎಂದು ಆರ್ ಬಿ ಐ ತಿಳಿಸಿದೆ.ಇದೀಗ ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರು ಬಹಿರಂಗ ಮಾಡಲಾಗಿದೆ. ಇದರ ಜತೆಗೆ ಹಣಕಾಸು ನೀತಿ ಸಮಿತಿ ಸಭೆಯ ದಿನವನ್ನು ನಿಗದಿ ಮಾಡಲಾಗಿದೆ. ಈ ಹಿಂದೆ ಸಭೆಯು ಅಕ್ಟೋಬರ್ 1ಕ್ಕೆ ನಿಗದಿ ಆಗಿತ್ತು.
ವೈವಿಧ್ಯಮಯವಾದ ಹಿನ್ನೆಲೆ ಇರುವವರನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ವೈವಿಧ್ಯವಾದ ದೃಷ್ಟಿಕೋನ ಬರಲಿ ಎಂಬ ನಿರೀಕ್ಷೆ ಮಾಡಲಾಗಿದೆ. ಆರ್ಥಿಕ ತಜ್ಞರು ಹೇಳುವಂತೆ, ತಕ್ಷಣಕ್ಕೆ ಹಣಕಾಸು ನೀತಿ ವಿಚಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ. ಆದರೂ ಅಕ್ಟೋಬರ್ 9ನೇ ತಾರೀಕು ಘೋಷಣೆ ಆಗಲಿರುವ ಆರ್ ಬಿಐ ಹಣಕಾಸು ನೀತಿಯ ಬಗ್ಗೆ ಕಣ್ಣು ನೆಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ