ಮುಂಬೈ:
ಎಲ್ ಎ ಸಿಯಲ್ಲಿ ತನ್ನ ಕುತಂತ್ರಿ ಬುದ್ಧಿ ತೋರಿಸಿದ್ದ ಚೀನಾ ದೇಶ ಈಗ ಮತ್ತೊಂದು ತರಹದ ದಾಳಿಗೆ ಮುಂದಾಗಿದೆ ಅದುವೆ ಸೈಬರ್ ದಾಳಿ ಅರ್ಥಾತ್ ಹ್ಯಾಕಿಂಗ್ , ಸಿಚುವಾನ್ ಪ್ರಾಂತ್ಯದಿಂದ ಭಾರತದ ಮೇಲೆ ಸುಮಾರು 40,000 ಕ್ಕೂ ಹೆಚ್ಚು ಬಾರಿ ಚೀನಿಯರು ಸೈಬರ್ ದಾಳಿ ನಡೆಸಿದ್ದಾರೆ ಎಂದು ಮಹಾರಾಷ್ಟ್ರದ ಸೈಬರ್ ಕ್ರೈಂ ವಿಭಾಗದ ಪೊಲೀಸರು ತಿಳಿಸಿದ್ದಾರೆ. ಇನ್ನು ಇವರುಗಳು ಇಲ್ಲಿನ ಮೂಲಸೌಕರ್ಯ, ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳನ್ನು ಗುರಿಯಾಗಿರಿಸಿಕೊಂಡು ಈ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ.
ಭಾರತದ ಸೈಬರ್ ಸಂಪನ್ಮೂಲಗಳಾದ ಮೂಲಸೌಕರ್ಯ, ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳ ಮೇಲೆ ಹೆಚ್ಚಿನ ಸಂಖ್ಯೆಯ ದಾಳಿಗಳು ನಡೆದಿವೆ ತಿಳಿದುಬಂದಿದೆ. ಈ ದಾಳಿಗಳು ಹೆಚ್ಚಾಗಿ ಚೆಂಗ್ಡು ನಗರದಿಂದ ನಡೆದಿವೆ’ ಎಂದು ಐಜಿ (ಸೈಬರ್) ಯಶಸ್ವಿ ಯಾದವ್ ತಿಳಿಸಿದ್ದಾರೆ.
‘ಕಳೆದ ಕೆಲ ದಿನಗಳಲ್ಲಿ ಸರಿಸುಮಾರು 40,300 ಬಾರಿ ದಾಳಿ ನಡೆಸಿರುವುದು ಪತ್ತೆಯಾಗಿದೆ. ಇವುಗಳನ್ನು ಮೂರು ವರ್ಗಗಳಾಗಿ ವರ್ಗೀಕರಿಸಲಾಗಿದೆ’ ಎಂದು ಯಾದವ್ ಹೇಳಿದ್ದಾರೆ. ‘ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್‌ನ ಎಲ್ಲಾ ನಿವಾಸಿಗಳಿಗೆ ಉಚಿತ ಕೋವಿಡ್-19 ಪರೀಕ್ಷೆ’ ಎಂಬ ವಿಷಯದ ಸಾಲಿನೊಂದಿಗೆ ನಕಲಿ ಇ-ಮೇಲ್ ಐಡಿಯನ್ನು ಬಳಸಿಕೊಂಡು ಫಿಶಿಂಗ್ ದಾಳಿ ನಡೆಸುವ ಮೂಲಕ ವಂಚಕರು ಮಾಹಿತಿಯನ್ನು ಕದಿಯುವ ಸಾಧ್ಯತೆಗಳಿವೆ’ ಎಂದು ಮಹಾರಾಷ್ಟ್ರ ಸೈಬರ್ ವಿಭಾಗದ ಅಧಿಕಾರಿಗಳು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ವೊಲಾನ್ ಸೈಬರ್ ಸೆಕ್ಯುರಿಟಿಯ ಸಹ-ಸಂಸ್ಥಾಪಕ ಮುಸ್ಲಿಂ ಕೋಸರ್ ಮಾತನಾಡಿ, ‘ಕಳೆದ ಒಂದು ತಿಂಗಳಿನಿಂದ ಎರಡು ದೇಶಗಳ (ಭಾರತ– ಚೀನಾ) ನಡುವೆ ಗಡಿ ವಿವಾದ ಮುನ್ನೆಲೆಗೆ ಬಂದಾಗಿನಿಂದಲೂ ಡಿಜಿಟಲ್ ಕ್ಷೇತ್ರದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ