ಕಲ್ಲಿನಿಂದ ಹೊಡೆದು ಟಿ ಆರ್ ಎಸ್ ಮುಖಂಡನ ಹತ್ಯೆ

ಹೈದರಾಬಾದ್:
       ಟಿಆರ್ ಎಸ್ ನಾಯಕ ನಾರಾಯಣ ರೆಡ್ಡಿ ಅವರನ್ನು ಗುರುತು ಪತ್ತೆಯಾಗದ ದುಷ್ಕರ್ಮಿಗಳು ಕಲ್ಲುಗಳಿಂದ  ಹೊಡೆದು ಕೊಲೆ ಮಾಡಿರುವ ಘಟನೆ ವಿಕಾರಾಬಾದ್ ಜಿಲ್ಲೆಯ ಸುಲ್ತಾನ್ ಪುರ್ ಗ್ರಾಮದಲ್ಲಿ ನಡೆದಿದೆ.
      ಇಂದು ಬೆಳಿಗ್ಗೆ 6ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು. ನಾರಾಯಣ ರೆಡ್ಡಿ ಅವರ ಹತ್ಯೆಯ ತನಿಖೆ ಕೈಗೆತ್ತಿಕೊಂಡಿರುವ ಪೋಲೀಸರು ಈ ಹತ್ಯೆ ಹಿಂದೆ ರಾಜಕೀಯದ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
      ಈ ಪ್ರದೇಶದ ಪ್ರಭಾವಿ ಮುಖಂಡರಾಗಿದ್ದ ನಾರಾಯಣ ರೆಡ್ಡಿ ಅವರು ಅದೇ ಗ್ರಾಮದ ಇನ್ನೊಂದು ಗುಂಪಿನೊಂದಿಗೆ ವೈರತ್ವ ಹೊಂದಿದ್ದರು ಎನ್ನಲಾಗಿದೆ ಅಲ್ಲದೆ ಆ ಗುಂಪಿನ ಮೇಲೆ ಹಿಂದೊಮ್ಮೆ ಹಲ್ಲೆ ನಡೆಸಿದ್ದರೆಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link