ವಿವಿ ಘಟಿಕೋತ್ಸವ :ಚಿನ್ನದ ಪದಕ ವಿಜೇತ ಮುಸ್ಲಿಂ ವಿದ್ಯಾರ್ಥಿನಿಯನ್ನು ಹೊರಗಿಟ್ಟ ಪೊಲೀಸರು

ಪುದುಚೆರಿ:

      ಮುಸ್ಲಿಂ ಮಹಿಳೆಯರು ಸಮಾನ್ಯವಾಗಿ ಓಡಾಡುವಾಗ ಧರಿಸುವ ಹಿಜಾಬ್ ಧರಿಸುತ್ತಾರೆ ಇದನ್ನು ಈಗಿನ ವರೆಗೂ ಯಾವ ಸಭೆ ಸಮಾರಂಭಗಳಲ್ಲೂ ಧರಿಸದಂತೆ ನಿಯಮವಿಲ್ಲ ಆದರೆ ಪುದುಚೆರಿಯ ವಿಶ್ವವಿದ್ಯಾಲಯದಲ್ಲಿ ಹಿಜಾಬ್ ಧರಿಸಿದ ಕಾರಣಕ್ಕೆ ಚಿನ್ನದ ಪದಕ ವಿಜೆತೆಯನ್ನು ಹೊರ ನೂಕಿದ ಪ್ರಸಂಗ ವರದಿಯಾಗಿದೆ.

    ಹಿಜಾಬ್ ಧರಿಸಿದ್ದಾರೆ ಎಂಬ ಓಂದೇ ಒಂದು  ಕಾರಣಕ್ಕೆ ಮುಸ್ಲಿಂ ವಿದ್ಯಾರ್ಥಿನಿಯನ್ನು ಘಟಿಕೋತ್ಸವ ಸಮಾರಂಭದಿಂದ  ಹೊರಗೆ ಕಳುಹಿಸಿದ ಘಟನೆ ಪುದುಚೆರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.ನಿನ್ನೆ ಪುದುಚೆರಿ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭ ನಡೆದಿದ್ದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಿದ್ದರು. ಅದರಲ್ಲಿ ಚಿನ್ನದ ಪದಕ ಗಳಿಸಿದ 10 ಮಂದಿ ವಿದ್ಯಾರ್ಥಿಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿ ರಬೀಹಾ ಅಬ್ದುರೆಹಿಮ್ ಕೂಡ ಇದ್ದರು. ಘಟಿಕೋತ್ಸವದಲ್ಲಿ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕರಿಸಲು ಖುಷಿಯಿಂದ ಕುಳಿತಿದ್ದ ರಬೀಹಾರನ್ನು ಮಹಿಳಾ ಪೊಲೀಸ್ ಅಧಿಕಾರಿ ಏಕಾಏಕಿ ಹೊರಗೆ ಕರೆದರು. 

     ಪೊಲೀಸರು ಹೇಳುವ ಪ್ರಕಾರ ಈ ವಿದ್ಯಾರ್ಥಿನಿ ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಾನವ ಸರಪಳಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    ರಬೀಹಾ ಅಬ್ದುರೆಹಿಮ್ ಸಂವಹನ ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಮೊದಲ ಸ್ಥಾನ ಗಳಿಸಿದ್ದರು. ಹೀಗಾಗಿ ಚಿನ್ನದ ಪದಕಕ್ಕೆ ಪುರಸ್ಕೃತರಾಗಿದ್ದರು.ಘಟನೆ ಬಗ್ಗೆ ವಿವರಿಸಿದ ರಬೀಹಾ, ”ಜವಹರಲಾಲ್ ನೆಹರೂ ಸಭಾಂಗಣದಲ್ಲಿ ಏರ್ಪಾಡಾಗಿದ್ದ ಘಟಿಕೋತ್ಸವ ಸಮಾರಂಭದಲ್ಲಿ ಇತರ 9 ಮಂದಿ ವಿದ್ಯಾರ್ಥಿಗಳ ಜೊತೆ ಚಿನ್ನದ ಪದಕ ಗಳಿಸಲು ನಾನೂ ಕುಳಿತಿದ್ದೆ. ಆಗ ಅಲ್ಲಿಗೆ ಬಂದ ಮಹಿಳಾ ಹಿರಿಯ ಎಸ್ಪಿ ತಮ್ಮ ಜೊತೆ ಬನ್ನಿ ಎಂದು ಹೊರಗೆ ಕರೆದುಕೊಂಡು ಹೋದರು. ಹೊರಗೆ ಹೋದಾಗ ಯಾಕೆ ಹಿಜಾಬ್ ಧರಿಸಿದ್ದೀರಿ ಎಂದು ಕೇಳಿದರು. ನಾನು ಹೀಗೆ ಧರಿಸಿಕೊಳ್ಳುತ್ತೇನೆ ಎಂದಾಗ ಕಾರ್ಯಕ್ರಮದಲ್ಲಿ ಭಾಗವಹಿಸಬೇಡಿ, ಹೊರಗೆ ಕುಳಿತುಕೊಳ್ಳಬೇಡಿ ಎಂದರು” ಎಂದು ಹೇಳುತ್ತಾರೆ.

ಪಿ ಚಿದಂಬರಂ ಆಕ್ರೋಶ :

    ಘಟಿಕೋತ್ಸವದಿಂದ ವಿದ್ಯಾರ್ಥಿನಿ ರಬೀಹಾರನ್ನು ಹೊರಗಿಡುವ ಮೂಲಕ ಅವರ ಹಕ್ಕುಗಳನ್ನು ಕಸಿಯಲಾಗಿದೆ. ಅವರನ್ನು ಹೊರಗಿಡುವ ನಿರ್ಧಾರ ಮಾಡಿದ ಅಧಿಕಾರಿ ಯಾರು? ವಿದ್ಯಾರ್ಥಿನಿಯ ನಾಗರಿಕ ಹಕ್ಕುಗಳನ್ನು ಕಸಿದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಟ್ವೀಟ್ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link