ಮುಸ್ಲಿಮರು ಕಾಂಗ್ರೆಸ್ ಗೆ ವೋಟ್ ಹಾಕಬೇಡಿ: ಮಾಯಾವತಿ  

ಲಕ್ನೋ

     ಸದಾ ಬಿಜೆಪಿಯನ್ನು ಟೀಕಿಸುವ ಮಾಯಾವತಿ ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ . ಕಾಂಗ್ರೆಸ್ ಪಕ್ಷಕ್ಕೆ ಯಾವ ಕಾರಣಕ್ಕೂ ಮತಹಾಕಬೇಡಿ ಎಂದು ಮುಸ್ಲಿಮರಲ್ಲಿ ಮನವಿ ಮಾಡಿದ್ದಾರೆ.

      ಪಶ್ಚಿಮ ಉತ್ತರಪ್ರದೇಶದ ಸಹರಣಪುರದ ದಿಯೋಬಂದ್ ನಲ್ಲಿ ಜಂಟಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಾಯಾವತಿ, ಮುಸ್ಲಿಮರು ತಮ್ಮ ಮತವನ್ನು ಗಂಭೀರವಾಗಿ ಯೋಚಿಸಿ ಚಲಾಯಿಸಬೇಕು. ನೀವು ಕಾಂಗ್ರೆಸ್ಸಿಗೆ ಮತಹಾಕುವುದೂ ಒಂದೇ, ಬಿಜೆಪಿಗೆ ಹಾಕುವುದೂ ಒಂದೇ ಎಂದು ಹೇಳಿದ್ದಾರೆ.

     ಟಿಕೆಟ್ ಗಾಗಿ ನೋಟು, ಇದು ಮಾಯಾವತಿ ಸಿದ್ಧಾಂತ: ಮನೇಕಾ ಗಾಂಧಿ ಮುಸ್ಲಿಮರ ಪ್ರಾಭಲ್ಯವಿರುವ ಈ ಕ್ಷೇತ್ರದಲ್ಲಿ ಎಸ್ಪಿ ಮತ್ತು RLD ಜೊತೆ ಜಂಟಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಕಾಂಗ್ರೆಸ್ಸಿಗೆ ನೀವು ಮತಹಾಕಿದರೆ, ಅದು ಮತವಿಭನೆಯಾಗಿ ಬಿಜೆಪಿಗೆ ಅನುಕೂಲವಾಗುತ್ತದೆ. ಹಾಗಾಗಿ, ಯಾರೂ ಕಾಂಗ್ರೆಸ್ಸಿಗೆ ಮತಹಾಕಬೇಡಿ ಎಂದು ಮತದಾರರಲ್ಲಿ ಮಾಯಾವತಿ ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link