ಸ್ವಚ್ಚ ನಗರ ಪಟ್ಟಿ ಬಿಡುಗಡೆ : ಮೈಸೂರು 3ನೇ ಸ್ಥಾನವಾದರೆ,ಬೆಂಗಳೂರು ????

ನವದೆಹಲಿ:

        ಕಳೆದ ಎರಡು ವರ್ಷಗಳ ಸ್ವಚ್ಚತಾ ಚಾರ್ಟ್ಗಳಲ್ಲಿ ಅಗ್ರಸ್ಥಾನ ಪಡೆದ ನಂತರ ಮೈಸೂರು ಭಾರತದಲ್ಲಿ ಸ್ವಚ್ಚ್ ಸರ್ವೇಕ್ಷನ್ 2019 ರಲ್ಲಿ ಮೂರನೇ ಅತಿಸ್ವಚ್ಚ ನಗರವಾಗಿ ಹೊರಹೊಮ್ಮಿದೆ. ಮೈಸೂರು ಹೊರತುಪಡಿಸಿದರೆ, ಒಟ್ಟಾರೆಯಾಗಿ 26 ಕ್ಕೂ ಹೆಚ್ಚಿನ ಇತರ ಕರ್ನಾಟಕ ನಗರಗಳು ಅಗ್ರಸ್ಥಾನದಲ್ಲಿವೆ.

        “ಈ ವರ್ಷದ ಮೈಸೂರಿನ ಸಾಧನೆಯನ್ನು ಯಶವನ್ನು ನಾಗರಿಕರಿಗೆ ಸಂಪೂರ್ಣ ಸಮರ್ಪಣೆ ಮಾಡಿದ್ದೇವೆ, ಏಕೆಂದರೆ ನಾವು ರಾಷ್ಟ್ರೀಯ ಮಟ್ಟದಲ್ಲಿ ಮೂರನೆಯ ಸ್ಥಾನ ಗಳಿಸಿಕೊಂಡಿದ್ದೇವೆ ಇದಕ್ಕೆ ಮುಖ್ಯವಾಗಿ ಸಾರ್ವಜನಿಕರ ಸಹಕಾರ,” ಎಂದು ಡೈರೆಕ್ಟರೇಟ್ ಆಫ್ ಫೀಲ್ಡ್  ಪಬ್ಲಿಸಿಟಿ ಉಪ ನಿರ್ದೇಶಕ ಡಾ. ಟಿಸಿ ಪೂರ್ಣಿಮಾ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಓಪನ್ ಡೆಫೆಕೇಷನ್ ಫ್ರೀ ಪ್ಲಸ್ನ ಟ್ಯಾಗ್ ಅನ್ನು ಮೈಸೂರು ಮೂರನೆಯ ಸ್ವಚ್ಛವಾದ ನಗರವಾದ ಬಳಿಕ ನೀಡಿದ್ದಾರೆ ಮತ್ತು  ಮೈಸೂರು ಬಯಲು ಬಹೀರ್ದೆಸೆ  ಮುಕ್ತ ನಗರವಾಗಿದೆ ಎಂದು ಸಮೀಕ್ಷಕರು ತಿಳಿಸಿದ್ದಾರೆ.

         ಮೈಸೂರು ನಗರವೂ ಇದ್ದ 5000 ಅಂಕಗಳಿಗೆ ಸರಿಸುಮಾರು 4378.5 ಅಂಕ ಪಡೆದುಕೊಂಡು ಮೂರನೆ ಸ್ಥಾನದಲ್ಲಿದ್ದರೇ,ರಾಜ್ಯದ ಎರಡನೇ ಅತಿ ಸ್ವಚ್ಛವಾದ ನಗರವೆಂಬ ಹೆಗ್ಗಳಿಕೆ ಇದ್ದರೂ,ಮಂಗಳೂರಿನಲ್ಲಿ 165 ನೇ ಸ್ಥಾನದಲ್ಲಿದೆ . ಉದ್ಯಾನ ನಗರ ಬೆಂಗಳೂರಿನವರು ಕಳೆದ ವರ್ಷದ 216 ನೇ ಸ್ಥಾನಕ್ಕೆ ಹೋಲಿಸಿದರೆ ಅದರ ಶ್ರೇಯಾಂಕವನ್ನು 194 ಕ್ಕೆ ಬಂದಿರುವುದು  ಸಮಾಧಾನಕರವಾಗಿದೆ.

     ಮೈಸೂರು ಮಧ್ಯಪ್ರದೇಶದ ಇಂದೋರ್ ಮತ್ತು ಛತ್ತೀಸ್ಗಢದ ಅಂಬಿಕಾಪುರ್ಗಿಂತ ಕಡಿಮೆ ಸ್ಥಾನದಲ್ಲಿದೆ. ಇವುಗಳನ್ನು ಕ್ರಮವಾಗಿ ಸ್ವಚ್ಛ ಮತ್ತು ಎರಡನೇ ಸ್ವಚ್ಛ ನಗರಗಳಾಗಿ ಆಯ್ಕೆ ಮಾಡಲಾಗಿದೆ. ಪ್ರಾಸ್ತಾವಿಕವಾಗಿ 2019 ರಲ್ಲಿ ಈ ಸಮೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು , ಇಂದೋರ್ ಭಾರತದಲ್ಲಿ ಸ್ವಚ್ಛವಾದ ನಗರವೆಂದು ಅದರ ಹ್ಯಾಟ್ರಿಕ್ ಅನ್ನು ಪೂರ್ಣಗೊಳಿಸಿದೆ. ರಾಜ್ಯದ ರಾಜಧಾನಿಗಳಲ್ಲಿ, ಭೋಪಾಲ್ ಸ್ವಚ್ಛವಾದದ್ದು ಎಂದು ಕಂಡುಬಂದಿದೆ.

      ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ (6), ತೆಲಂಗಾಣ (8) ಮತ್ತು ತಮಿಳುನಾಡು (12) ಗೆ ಹೋಲಿಸಿದರೆ ಕರ್ನಾಟಕವು 14 ನೇ ಸ್ಥಾನ ಪಡೆದುಕೊಂಡಿದೆ. ಕೇರಳ 21 ನೇ ಸ್ಥಾನ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap