ಹೀರಾ ಚಿಟ್ ಫಂಡ್ ಹಗರಣ : ನೌಹೇರಾ ಶೇಕ್ ಗೆ ಷರತ್ತು ಬದ್ದ ಜಾಮೀನು.!

ತೆಲಂಗಾಣ :

      ಹೀರಾ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಕ್‌ಗೆ ತೆಲಂಗಾಣ ಹೈಕೋರ್ಟ್ ಮಂಗಳವಾರ ಷರತ್ತುಬದ್ಧ ಜಾಮೀನು ನೀಡಿದೆ. ದೇಶಾದ್ಯಂತ ಸುಮಾರು 2 ಲಕ್ಷ ಹೂಡಿಕೆದಾರರಿಗೆ ಸುಮಾರು 2000 ಕೋಟಿ ರೂ.ಗಳಷ್ಟು ವಂಚನೆ ಆರೋಪ ಎದುರಿಸುತ್ತಿದೆ.

     ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ ಶ್ರೀ ದೇವಿ, ನೌಹೇರಾ ಅವರಿಗೆ 5 ಕೋಟಿ ರೂ.ಗಳನ್ನು ಜಾಮೀನು ರೂಪದಲ್ಲಿ ಜಮಾ ಮಾಡುವಂತೆ ಆದೇಶಿಸಿದ್ದಾರೆ ಮತ್ತು ನ್ಯಾಯಾಲಯದ ಅನುಮತಿಯಿಲ್ಲದೆ ವಿದೇಶ ಪ್ರಯಾಣವನ್ನು ಕೈಗೊಳ್ಳದಂತೆ ನಿರ್ಬಂಧಿಸಲಾಗಿದೆ ಎಂದು ಹೇಳಿದರು. ನ್ಯಾಯಾಲಯವು ಆಕೆಯ ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ನೀಡಲು ತಿಳಿಸಿದೆ ಮತ್ತು ತನಿಖೆ ಪೂರ್ಣಗೊಳ್ಳುವವರೆಗೆ ಪ್ರತಿ ದಿನ ಹತ್ತಿರದ ಪೊಲೀಸ್ ಠಾಣೆಯಲ್ಲಿ ಸಹಿ ಮಾಡಬೇಕು ಎಂದು ತಾಕೀತು ಮಾಡಿದೆ. 

    ಈ ಪ್ರಕರಣದ ತನಿಖೆಯನ್ನು ತೆಲಂಗಾಣ ಪೊಲೀಸರಿಂದ ನವದೆಹಲಿಯ ಗಂಭೀರ ವಂಚನೆ ತನಿಖಾ ಕಚೇರಿಗೆ (ಎಸ್‌ಎಫ್‌ಐಒ) ಹೈಕೋರ್ಟ್ ವರ್ಗಾಯಿಸಿದೆ.ನೌಹೇರಾ ಮಾಡಿದ ಅಪರಾಧಗಳು ಹಣಕಾಸಿನ ಸ್ವರೂಪದ್ದಾಗಿವೆ ಮತ್ತು ಎಸ್‌ಎಫ್‌ಐಒ ಅಡಿಯಲ್ಲಿ ಬರುತ್ತವೆ ಇದರಿಂದಾಗಿ ಈ ಪ್ರಕರಣ ಯಾವುದೆ ರೀತಿಯಲ್ಲೂ ಐಪಿಸಿಯ ನಿಬಂಧನೆಗಳಿಗೆ ಒಳಪಡುವುದಿಲ್ಲ ಎಂದು ನೌಹೆರಾ ಅವರ ವಕೀಲರು ವಾದಿಸಿದ್ದರು.

   ಮೋಸ, ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣಗಳಿಗಾಗಿ ಹೈದರಾಬಾದ್‌ನ ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ದಾಖಲಾಗಿರುವ ಪ್ರಕರಣದ ತನಿಖೆಯ ವೇಳೆ ಈ ಬಂಧನ ಮಾಡಲಾಗಿದೆ.ಭಾರತ ಮತ್ತು ಮಧ್ಯಪ್ರಾಚ್ಯದಲ್ಲಿ ವಿವಿಧ ವ್ಯವಹಾರಗಳನ್ನು ನಡೆಸುತ್ತಿರುವ ನೌಹೆರಾ ವಿರುದ್ಧ ದೋಷಾರೋಪಣೆ ಸಾಕ್ಷ್ಯಗಳು ದೊರೆತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

  ಸಧ್ಯ ನೌಹೆರಾ ಅವರನ್ನು ಚಂಚಲ್ಗುಡಾ ಮಹಿಳಾ ಜೈಲಿನಲ್ಲಿ ಇರಿಸಲಾಗಿದೆ. ಕೆಳ ನ್ಯಾಯಾಲಯಗಳು ಕೆಲವು ಪ್ರಕರಣಗಳಲ್ಲಿ ಜಾಮೀನು ನೀಡಿದ್ದರೂ, ಆಕೆಯ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳಲ್ಲಿ ಆಕೆ ಇನ್ನೂ ಜಾಮೀನು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap