ಅತಿಯಾದ ಭ್ರಷ್ಟಾಚಾರ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ : ಕಮಲ ಹಾಸನ್

ಚೆನ್ನೈ

      ಗೃಹಿಣಿಯರಿಗೆ ಸಂಬಳ, ಜನರನ್ನು ಸಬಲೀಕರಣಗೊಳಿಸಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಮತ್ತಿತರ ಎಂಟರ್ ಪ್ರೈಸ್  ಎಕಾನಮಿ ಅಂಶಗಳ ಮೂಲಕ ತಮಿಳುನಾಡನ್ನು ಮರುರೂಪಿಸುವುದಾಗಿ ನಟ , ರಾಜಕಾರಣಿ ಕಮಲ್ ಹಾಸನ್ ಪ್ರಕಟಿಸಿದ್ದಾರೆ.

       ಮಕ್ಕಳ್ ನಿಧಿ ಮೈಮ್ ಪಕ್ಷದ ಅಧ್ಯಕ್ಷರೂ ಆಗಿರುವ ಕಮಲ್ ಹಾಸನ್, ತಮ್ಮ ಪಕ್ಷದ ವಿಷನ್ ಡಾಕ್ಯುಮೆಂಟನ್ನು ಟ್ವೀಟ್ ಮಾಡಿದ್ದಾರೆ.ಈ ಕೇಂದ್ರಿತ ಸಿದ್ದಾಂತದೊಂದಿಗೆ ಎರಡು ಪಟ್ಟು ಬದಲಾವಣೆ ತರುವ ನಿಟ್ಟಿನಲ್ಲಿ ಪಕ್ಷ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡನ್ನು ಮರು ರೂಪಿಸಲಾಗುವುದು,  ರಾಜಕೀಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

     ಅತಿಯಾದ ಭ್ರಷ್ಟಾಚಾರ ರಾಜ್ಯದ ವರ್ಚಸ್ಸನ್ನು ಕಡಿಮೆ ಮಾಡಿದೆ ಮತ್ತು  ಅಭಿವೃದ್ಧಿ ಹೊಂದುವ ಸಾಮರ್ಥ್ಯವನ್ನು ಕಡಿಮೆ ಮಾಡಿದೆ ಎಂದಿರುವ ಕಮಲ್ ಹಾಸನ್, ಎಂಟರ್ ಪೈಸ್ ಎಕನಾಮಿಯಿಂದ ಉದ್ಯೋಗ ಸೃಷ್ಟಿಯಾಗಲಿದ್ದು, ಪ್ರತಿ ತಮಿಳು ಜನರು ಸಮೃದ್ಧಿಯನ್ನು ಸಾಧಿಸಬಹುದು ಎಂದು ಅವರು ಹೇಳಿದ್ದಾರೆ. 

             ಗೃಹಿಣಿಯರದು  ದೊಡ್ಡ ಕೆಲಸವಾಗಿದ್ದು, ಅವರಿಗೂ ಸಂಬಳ ನೀಡಬೇಕಾಗಿದೆ. ಅವರ ಉದ್ಯೋಗಕ್ಕೆ ಸಂಬಳ ನೀಡಬೇಕಾದ ಸಮಯ ಈಗ ಬಂದಿದೆ. ಅದನ್ನು ನಾವು ಈಡೇರಿಸುತ್ತೇವೆ ಎಂಬ ಭರವಸೆಯನ್ನು ವಿಷನ್ ಡಾಕ್ಯುಮೆಂಟ್ ನಲ್ಲಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap