ಅಗರ್ತಲಾ:
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಜೋಸೆಫ್ ಸ್ಟಾಲಿನ್ ವ್ಯವಸ್ಥಿತವಾಗಿ ಕೊಲೆ ಮಾಡಿಸಿದ್ದನು. ನೇತಾಜಿ 1945ರ ವಿಮಾನ ದುರಂತದಲ್ಲಿ ಸಾವನ್ನಪ್ಪಿರಲಿಲ್ಲ ಎಂದು ಬಿಜೆಪಿ ಮುಖಂಡರಾದ ಸುಬ್ರಮಣ್ಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.ಸಂಸ್ಕೃತ್ ಗೌರವ ಸಂಘನೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಸ್ವಾಮಿ ಬೋಸ್ ತಾವು ಸೋವಿಯತ್ ರಾಷ್ಟ್ರದಲ್ಲಿ ರಕ್ಷಣೆ ಪಡೆದಿದ್ದು ಅವರು ಅಲ್ಲಿಯೇ ಹತ್ಯೆಗೀಡಾದರು ಎಂದರು.
ನೇತಾಜಿ 1945 ರಲ್ಲಿ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಮೃತರಾಗಲಿಲ್ಲ.ಅವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನುವುದು ಸುಳ್ಳು. ಇದನ್ನು ನೆಹರೂ ಮತ್ತು ಜಪಾನಿಯರು ಹುಟ್ಟು ಹಾಕಿದ್ದಾರೆ. ಸುಭಾಷ್ ಚಂದ್ರ ಬೋಸ್ ರಷ್ಯಾದಲ್ಲಿ ಆಶ್ರಯ ಬಯಸಿದ್ದರು,.
ರಷ್ಯಾದಲ್ಲಿ ಬೋಸ್ ಇದ್ದದ್ದು ನೆಹರೂ ಅವರಿಗೆ ಸಹ ತಿಳಿದಿತ್ತು ಲ್ಲಿ ಅವರನ್ನು ರಷ್ಯಾದ ಮಾಜಿ ಅಧ್ಯಕ್ಷ ಜೋಸೆಫ್ ಸ್ಟಾಲಿನ್ ವ್ಯವಸ್ಥಿತ ರೀತಿಯಲ್ಲಿ ಹತ್ಯೆ ಮಾಡಿದ್ದಾನೆ” ಎಂದು ಸ್ವಾಮಿ ಹೇಳಿದ್ದಾರೆ.
75 ವರ್ಷಗಳ ಹಿಂದೆಯೇ ಸಿಂಗಾಪುರದಲ್ಲಿ ರೂಪುಗೊಂಡ ನೇತಾಜಿ ಸುಭಾಷ್ ಚಂದ್ರ ಬೋಸ್ ಆಜಾದ್ ಹಿಂದ್ ಸರ್ಕಾರದ ಕಾರಣ ಬ್ರಿಟಿಷ್ ವಸಾಹತುಶಾಹಿ ಆಡಳಿತಗಾರರು ಭಾರತಕ್ಕೆ ಸ್ವಾತಂತ್ರ್ಯ ನೀಡಿದರು ಬ್ರಿಟಿಷ್ ಪ್ರಧಾನಮಂತ್ರಿ ಕ್ಲೆಮೆಂಟ್ ಆಟ್ಲೆ 1948 ರಲ್ಲಿ ಭಾರತಕ್ಕೆ ಭೇಟಿ ನೀಡಿದಾಗ “ಬ್ರಿಟೇಃಷ್ ವಸಾಹತುಷಾಹಿ ಜನರಿಗಿಂತ ದೊಡ್ಡ ಪ್ರಮಾಣದಲ್ಲಿದ್ದ ಭಾರತೀಯರೇನಾದರೂ ಶಸ್ತ್ರಾಸ್ತ್ರ ಹಿಡಿದು ಬ್ರಿಟೀಷರ ವಿರುದ್ಧ ಹೋರಾಡಿದರೆ ಆಗ ಅದು ಬ್ರಿಟೀಷರಿಗೆ ಮಾರಕವಾಗಲಿದೆ” ಎಂದು ಒಪ್ಪಿಕೊಂಡಿದ್ದರು ಎನ್ನುವುದಾಗಿ ಸ್ವಾಮಿ ಹೇಳಿದ್ದಾರೆ.