ಕೇಂದ್ರಕ್ಕೆ ಹೊಸ ತಲೆ ನೋವು ತಂದ ಆಪ್ ಮುಖಂಡನ ಪ್ರಶ್ನಾವಳಿ…..!

ನವದೆಹಲಿ:
      ರಾಫೆಲ್ ಯುದ್ದ ವಿಮಾನ ಪ್ರಕರಣ ಕೇಂದ್ರಕ್ಕೆ ತಲೆನೋವು ತಂದಂತಹ ಪ್ರಕರಣ ಎಂದರೆ ತಪ್ಪಾಗಲಾರದು ಯಾಕೆಂದರೆ ಅತ್ಯಂತ ದುಬಾರಿ ಮತ್ತು ಅತಿ ಆಧುನಿಕ ಯುದ್ಧ ವಿಮಾನ ಇದಾಗಿದ್ದು ಇದು ರಕ್ಷಣಾ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ ತರಬಲ್ಲ ಶಕ್ತಿ ಹೊಂದಿದೆ. ಇದೇ ವಿಮಾನ ಒಪ್ಪಂದ ಆಗಿದ್ದು ಯುಪಿಎ ಹಯಾಮಿನಲ್ಲಾದರೂ ಅವರು ಆರಂಭಿಕ ಮಾದರಿಯನ್ನು ಭಾರತಕ್ಕೆ ತರಲು ಮಾಡಿದ್ದರು. ಆದರೆ ನಾವು ಪೂರ್ತಿ ಶಸ್ತ್ರ ಸಜ್ಜಿತ ಮತ್ತು ಸುಧಾರಿತ ವಿಮಾನ ತರುತ್ತಿದೇವೆ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರಕ್ಕೆ ಇದೀಗ ಮತ್ತೊಂದು ಸಂಕಷ್ಡ ಎದುರಾಗಿದೆ.  ಅದೇ ಖ್ಯಾತ ವಕೀಲ ಹಾಗೂ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಅವರು ಸರ್ಕಾರದ ಮುಂದೆ ಇಟ್ಟಿರುವ ಪ್ರಶ್ನಾವಳಿ ಸರ್ಕಾರದ ತಲೆನೋವಿಗೆ ಕಾರಣವಾಗಿದೆ.
          ಕಾಂಗ್ರೆಸ್, ವಿಪಕ್ಷಗಳು ಹಾಗೂ ಕೇಂದ್ರಸರ್ಕಾರದ ನಡುವಿನ ತಿಕ್ಕಾಟಕ್ಕೆ ಕಾರಣವಾಗಿರುವ ರಾಫೆಲ್ ಜೆಟ್ ಯುದ್ಧ ವಿಮಾನ ಪ್ರಕರಣ ಇದೀಗ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ವಿವರ ನೀಡಿದೆಯಾದರೂ, ಸರ್ಕಾರವೇ ನೀಡಿರುವ ವಿವರಗಳಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ. ಇದೇ ಪ್ರಶ್ನೆಗಳು ಇದೀಗ ಕೇಂದ್ರ ಸರ್ಕಾರದ ತಲೆನೋವಿಗೆ ಕಾರಣವಾಗಿವೆ.

          ಅದರಲ್ಲಿ ಪ್ರಮುಖವಾಗಿ ಹೇಲುವುದಾದರೆ ವಾಸ್ತವಾಗಿ ವಾಯು ಸೇನೆಗೆ 126 ಯುದ್ಧ ವಿಮಾನಗಳ ಅವಶ್ಯಕತೆ ಇದ್ದು ಕೇವಲ 36 ವಿಮಾನಗಳ ಖರೀದಿಗೆ ಸರ್ಕಾರ ಮುಂದಾಗಿದೇಕೆ? ಇನ್ನೂ ಮುಂತಾದ ಬೆವರಿಳಿಸುವ ಪ್ರಶ್ನೆಗಳನ್ನು ಕೇಲುವ ಮೂಲಕ ಕೇಂದ್ರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದ್ದಾರೆ .

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link