ಮುಂಬೈ
ದಿನೇ ದಿನೆ ಮಹಾನಗರಗಳಲ್ಲಿ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಮುಂಬೈನಲ್ಲಿ ಹೊಸ ಮಾದರಿ ಸಿಗ್ನಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.ಟ್ರಾಫಿಕ್ ಸಿಗ್ನಲ್‌ಗಳಲ್ಲಿ ವಾಹನಗಳು ನಿಂತಾಗ, ಮುಂದಿರುವ ವಾಹನಗಳು ಬೇಗ ಸಾಗಲಿ ಎಂಬ ಉದ್ದೇಶದಿಂದ ಹಿಂದಿರುವ ವಾಹನಗಳ ಸವಾರರು ಜೋರಾಗಿ ಹಾರ್ನ್ ಮಾಡುವುದು ನಗರಗಳಲ್ಲಿ ಸಾಮಾನ್ಯವಾಗಿದೆ.
ಆದರೆ ಮುಂಬೈನಲ್ಲಿ ಈ ರೀತಿ ಮಾಡಿದರೆ ಏನಾಗುತ್ತೆ ಗೊತ್ತಾ, ಟ್ರಾಫಿಕ್ ಸಿಗ್ನಲ್ ನ ಕೆಂಪು ದೀಪವು ಆಫ್ ಆಗಿ ಹಸಿರು ಬಣ್ಣದ ದೀಪ ಆನ್ ಆಗುವುದೇ ಇಲ್ಲ.ಹೌದು ಶಬ್ದ ಮಾಲಿನ್ಯ ತಡೆಯಲು ಇಂತಹ ವಿನೂತನ ವ್ಯವಸ್ಥೆಯನ್ನು ಮುಂಬೈ ಪೊಲೀಸರು ಅಳವಡಿಸಿದ್ದಾರೆ. ಈಗಾಗಲೇ 1 ದಿನ ಇದನ್ನು ಪ್ರಾಯೋಗಿಕವಾಗಿ ಹಲವು ಸಿಗ್ನಲ್‌ಗಳಲ್ಲಿ ಅಳವಡಿಸಲಾಗಿದೆ.ಇಲ್ಲಿ ವಾಹನಗಳ ಶಬ್ದ 80 ಡೆಸಿಬಲ್‌ಗಿಂತ ಹೆಚ್ಚಾದಲ್ಲಿ ಆ ಬದಿಯ ಟ್ರಾಫಿಕ್ ಸಿಗ್ನಲ್‌ನ ಹಸಿರು ದೀಪವು ಆನ್ ಆಗುವುದೇ ಇಲ್ಲ. ಹಾರ್ನ್ ಶಬ್ದವು 85 ಡೆಸಿಬಲ್‌ಗಿಂತ ಕಡಿಮೆ ಆದಲ್ಲಿ ಮಾತ್ರ ಹಸಿರು ಲೈಟ್ ಆನ್ ಆಗುತ್ತದೆ.
ಅನೇಕ ಟ್ರಾಫಿಕ್ ಸಿಗ್ನಲ್ ಡೆಸಿಬಲ್ ಮೀಟರ್‌ಗಳಲ್ಲಿ ಅಳವಡಿಸಲಾಗಿದ್ದು, ಅವುಗಳನ್ನು ಸಿಗ್ನಲ್ ದೀಪಕ್ಕೆ ಸಂಯೋಜಿಸಲಾಗಿದೆ.ಸಿಎಸ್ಎಂಟಿ, ಮರೈನ್ ಡ್ರೈವ್, ಪೆದ್ದಾರ್ ರೋಡ್, ಹಿಂದ್ ಮಾತಾ ಹಾಗೂ ಬಾಂದ್ರಾದಲ್ಲಿ ಪೊಲೀಸರು ಈಗ ಈ ತಂತ್ರಜ್ಞಾನ ಅಳವಡಿಸಿದ್ದಾರೆ.ಪ್ರಾಯೋಗಿಕವಾಗಿ ಇದರ ಪರೀಕ್ಷೆ ನಡೆದ ದಿನ ಹಲವು ಸಿಗ್ನಲ್‌ಗಳಲ್ಲಿ ಕೆಂಪು ದೀಪ ಹಸಿರಾಗಿ ಪರಿವರ್ತನೆ ಆಗದೆ ವಾಹನ ಸವಾರರು ಪರದಾಡಿದರು.ಬೆಂಗಳೂರಲ್ಲಿ ಕೂಡ ಇಂಥದ್ದೇ ವ್ಯವಸ್ಥೆ ಜಾರಿಗೆ ಬಂದರೆ ಅಚ್ಚರಿ ಪಡುವ ಹಾಗಿಲ್ಲ.