ತಮಿಳು ನಾಡಿನಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧ !!!

ಚೆನ್ನೈ:
      ಜಗತ್ತಿನ ಜನರು ಹೊಸ ವರ್ಷದ ಸಮಯದಲ್ಲಿ ಹೊಸ ವರ್ಷದಲ್ಲಿ ಗುಣಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳವುದು ಸಮಾನ್ಯ ಅದೇ ರೀತಿಯಲ್ಲಿ ತಮಿಳುನಾಡು ಸರ್ಕಾರವೂ ಒಂದು ಮಹತ್ವದ ನಿರ್ಧಾರ ಕೈಗೊಂಡಿದೆ.
     ತ.ನಾ ಸರ್ಕಾರದ ನ್ಯೂ ಇಯರ್ ರೆಸೊಲ್ಯೂಷನ್ ಏನೆಂದರೆ ರಾಜ್ಯಾದ್ಯಂತ ಬಳಕೆಯಲ್ಲಿರುವ ಯೂಸ್ ಅಂಡ್ ಥ್ರೋ ಪ್ಲಾಸ್ಟಿಕ್ ಅನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
     ತಮಿಳುನಾಡು ಸರ್ಕಾರದ ಈ ನೂತನ ನಿಯಮದ ಪ್ರಕಾರ ಹೊಸ ವರ್ಷದ ಮೊದಲ ದಿನದಿಂದ ಪ್ಲಾಸ್ಚಿಕ್ ಕಾಫಿ, ನೀರು ಮತ್ತು ಜ್ಯೂಸಿನ ಲೋಟಗಳು, ಪ್ಲಾಸ್ಟಿಕ್ ಸ್ಟ್ರಾಗಳು, ಆಹಾರ ಪದಾರ್ಥಗಳ ಪೊಟ್ಟಣ ಕಟ್ಟಲು ಬಳಕೆ ಮಾಡುವ ಪ್ಲಾಸ್ಟಿಕ್ ಶೀಟ್ ಗಳು, ಥರ್ಮಕೋಲ್ ಪ್ಲೇಟ್ ಗಳು, ಬೌಲ್ ಗಳು, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್ ಗಳು, ಪ್ಲಾಸ್ಟಿಕ್ ಕೋಟೆಡ್ ಪೇಪರ್ ಲೋಟಗಳು, ಪ್ಲಾಸ್ಟಿಕ್ ಕವರ್ ಗಳು, ಕ್ಯಾರಿ ಬ್ಯಾಗ್ ಗಳನ್ನು ನಿಷೇಧ ಮಾಡಲಾಗಿದೆ ಎಂದು ತ ನಾ ಸರ್ಕಾರದ ವಾರ್ತಾ ಇಲಾಖೆ ಸೂಚನೆ ನೀಡಿದೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap