ನಾಗಪಟ್ಟಣಂ:
ಇತ್ತೀಚೆಗೆ ಸಿರಿಯಾದಲ್ಲಿ ಹತನಾದ ಬಗ್ದಾದಿ ಹತ್ಯೆಯ ನಂತರ ಇಸ್ಲಾಮಿಕ್ ಸ್ಟೇಟ್ ನಿಂದ ಪ್ರೇರಣೆ ಪಡೆದು ಉಗ್ರರು ತಮ್ಮ ಆಡಳಿತವನ್ನು ಸ್ಥಾಪಿಸುವ ಉದ್ದೇಶದಿಂದ ದೇಶದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸಿದ್ದ ಗುಂಪಿನ ವಿರುದ್ದ ನಡೆಸಲಾಗುತ್ತಿರುವ ತನಿಖೆಯ ಭಾಗವಾಗಿ ಎನ್ ಐ ಎ ಇಂದು ತಮಿಳುನಾಡಿನ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ನಡೆಸುತ್ತಿದೆ.
ಇಂದು ಬೆಳಗ್ಗೆ ದಾಳಿ ಹಾಗೂ ಶೋಧನೆಗಳು ಆರಂಭಗೊಂಡಿದ್ದು, ಕೊಯಮತ್ತೂರು ಜಿಲ್ಲೆಯ ಎರಡು ಸ್ಥಳಗಳು, ನಾಪಟ್ಟಣಂನ ಜಿಲ್ಲೆಯ ನಾಗೂರ್, ತೂತುಕುಡಿ ಜಿಲ್ಲೆಯ ಕಾಯಲ ಪಟ್ಟಿಣಂ ಹಾಗೂ ಶಿವಗಂಗಾ ಜಿಲ್ಲೆಯ ಇಳಿಯನಕುಡಿಯಲ್ಲಿ ದಾಳಿಗಳು ಮುಂದುವರಿದೆ ಎಂದು ಪ್ರಾಥಮಿಕ ವರದಿ ತಿಳಿಸಿವೆ. ತಮಿಳುನಾಡು ಮೂಲದ ತೀವ್ರವಾದಿ ಇಸ್ಲಾಮಿಕ್ ಸಂಘಟನೆ “ಅನ್ಸಾರುಲ್ಲಾ”ದ ಬಂಧಿತ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದವರ ಮನೆಗಳ ದಾಳಿ ನಡೆಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








