ವಿತ್ತ ಸಚಿವರಿಗೆ ಆರ್ಥಿಕತೆಯ ಬಗ್ಗೆ ಎಳ್ಳಷ್ಟು ಗೊತ್ತಿಲ್ಲ : ಆನಂದ ಶರ್ಮಾ

ನವದೆಹಲಿ:

    ಸದ್ಯ ದೇಶದಲ್ಲಿ ಆಗಿರುವ ಆರ್ಥಿಕ ಹಿಂಜರಿತವನ್ನು ತಡೆಯುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು ಅದನ್ನು ಮೇಲೆತ್ತಲು ಕೇಂದ್ರ ಮಾಡುತ್ತಿರುವುದು ಬರೀ ಬೂಟಾಟಿಕೆಯಷ್ಟೆ ಮತ್ತು ಕೇಂದ್ರ ತೆಗೆದುಕೊಂಡಿರುವ ಕ್ರಮಗಳು ಕೇವಲ ಅದನ್ನು ‘ಕಾಸ್ಮೆಟಿಕ್’ ಪ್ರಯತ್ನವಷ್ಚೇ ಎಂದು ಕಾಂಗ್ರೆಸ್ ವಕ್ತಾರ ಆನಂದ ಶರ್ಮಾ ಕಿಡಿಕಾರಿದ್ದಾರೆ.

 ವಿತ್ತ ಸಚಿವರಿಗೆ ಆರ್ಥಿಕತೆಯ ಬಗ್ಗೆ ಎಳ್ಳಷ್ಚೂ ಜ್ಞಾನವಿಲ್ಲ ಮತ್ತು ಅದರ ಗಂಧ ಗಾಳಿ ಗೊತ್ತಿಲ್ಲಾ ಎಂದಿದ್ದಾರಲ್ಲದೇ ನಿರ್ಮಲಾ ಅವರಿಗೆ  ಆರ್ಥಿಕ ಸಂಕಷ್ಟವನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿಲ್ಲ ಎಂದು ಟೀಕಿಸಿದ್ದಾರೆ. ಸಚಿವರು ಕೈಗೊಂಡಿರುವ ಆರ್ಥಿಕ ಉತ್ತೇಜನ ಕ್ರಮಗಳು ನೈಜವಾಗಿ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ. 

    ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ನಾವು ಕೇಂದ್ರ ಸರ್ಕಾರದಿಂದ ಸಾಕಷ್ಚು ನಿರೀಕ್ಷಿಸಿದ್ದೆವು. ಆದರೆ ಅದು ಸುಳ್ಳಾಗಿದೆ. ಸಚಿವರು ಕೈಗೊಂಡಿರುವ ಕ್ರಮಗಳು ಕೇವಲ ಕಾಸ್ಮೆಟಿಕ್ ವಾಗಿದ್ದು, ಇದು ಬಿಜೆಪಿ ಸರ್ಕಾರದ ದುರಹಂಕಾರದ ಪರಮಾವಧಿ ಎಂದು ಅನಂದ್ ಶರ್ಮಾ ಟೀಕಿಸಿದ್ದಾರೆ.

    ಇನ್ನು ಆರ್ಥಿಕ ಹಿನ್ನಡೆಯನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇದಕ್ಕಾಗಿ ಸುಮಾರು 70 ಸಾವಿರ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.ವಾಸ್ತವವಾಗಿ ಸಮಸ್ಯೆಯ ಮೂಲ ಹುಡುಕಕದ ಹೊರತು ನಾವು ಈ ಸಮಸ್ಯೆಯಿಂದ ಹೊರ ಬರಲು ಸಾಧ್ಯವಿಲ್ಲಾ ಎಂದಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ