ನವದೆಹಲಿ:
ಸದಾ ವಿವಾದಗಳಿಂದಲೇ ಸುದ್ದಿಯಾಗುವ ಮಣಿಶಂಕರ್ ಅಯ್ಯರ್ ಮತ್ತೊಂದು ಅತಿ ಸೂಕ್ಷ್ಮವಾದ ವಿಷಯದ ಬಗ್ಗೆ ಹೇಳಿಕೆ ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಮರ್ಯಾದಾ ಪುರುಶೋತ್ತಮ,ಏಕಪತ್ನಿ ತತ್ವ ಬೋಧಕನಾಗಿರುವಂತಹ ಶ್ರೀರಾಮ ಹಾಗು ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರುವ ಅಯೋಧ್ಯೆಯ ರಾಮ ಮಂದಿರದ ವಿಷಯದಲ್ಲಿ ಚರ್ಚೆಗೀಡಾಗುವಂತಹ ಸರಣಿ ಹೇಳಿಕೆಗಳನ್ನು ಏಕ್ ಶಾಮ್ ಬಾಬ್ರಿ ಮಸ್ಜೀದ್ ಕೆ ನಾಮ್ ಎಂಬ ಕಾರ್ಯಕ್ರಮದಲ್ಲಿ ಮಣಿಶಂಕರ್ ಅಯ್ಯರ್ ನೀಡಿದ ಹೇಳಿಕೆಯಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ . ದಶರಥನ ಮಹಲಿನಲ್ಲಿ 1,000 ರೂಮ್ ಗಳಿದ್ದವು ಈ ಪೈಕಿ ರಾಮ ಎಲ್ಲಿ ಹುಟ್ಟಿದ್ದೋ ಯಾರಿಗೆ ಗೊತ್ತಿರುತ್ತೆ ? ನಿಖರವಾಗಿ ಹೇಗೆ ಹೇಳುತ್ತಾರೆ? ಎಂದು ಪ್ರಶ್ನಿಸಿರುವುದು ಮಣಿಶಂಕರ್ ಅಯ್ಯರ್ ಅವರ ಪ್ರಮುಖ ಹೇಳಿಕೆಯಿಂದ ಹಿಂಧು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂದು ತಿಳಿದು ಬಂದಿದೆ .