ನವದೆಹಲಿ:
ಹಿತಿಹಾಸ ಮರುಕಳಿಸಿದೆ ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ ಹಾಗಿದ್ದರೂ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಾಗಿ ಗೆದ್ದರೂ ವಿರೋಧ ಪಕ್ಷದ ಸ್ಥಾನಕ್ಕೆ ಈಗ “ನೋಟಾ” ಅಡ್ಡಿ ಪಡಿಸಿದೆ.
ಫಲಿತಾಂಶಗಳ ಸಮೀಕ್ಷೆಯ ಪ್ರಕಾರ ಕಾಂಗ್ರೆಸ್ ಪಡೆದ ನಾಲ್ಕು ಸ್ಥಾನಗಳಿಗಿಂತ ನೋಟಾಕ್ಕೆ ಚಲಾವಣೇಯಾದ ಮತಗಳೇ ಹೆಚ್ಚಾಗಿವೆ , ನೋಟಾಗೆ ಸುಮಾರು 65 ಲಕ್ಷ ಮತಗಳನ್ನು ಚಲಾವಣೆ ಆಗಿದೆ ಬಿಹಾರದಲ್ಲಿ ಗರಿಷ್ಠ 8,17,139 ಮತಗಳು ಲಕ್ಷದ್ವೀಪದಲ್ಲಿ ಕನಿಷ್ಟ 100 ಮತಗಳು ನೋಟಾಗೆ ಚಲಾವಣೆಯಾಗಿದೆ.
ಇನ್ನು 21 ಸ್ಥಾನಗಳಲ್ಲಿ, ಗೆಲುವಿನ ಅಂತರವು ನೋಟಾದ ಮತಗಳಿಗಿಂತ ಕಡಿಮೆ! ಪಶ್ಚಿಮ ಬಂಗಾಳದಲ್ಲಿ ನಾಲ್ಕು ಸ್ಥಾನಗಳು, ಆಂಧ್ರಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಮೂರು, ತೆಲಂಗಾಣ ಮತ್ತು ಒಡಿಶಾದಲ್ಲಿ ಎರಡು, ಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ, ಜಾರ್ಖಂಡ್, ಛತ್ತೀಸ್ಗಢ, ಬಿಹಾರ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಪ್ರತಿ ಒಂದು ಸ್ಥಾನದಲ್ಲಿ ಗೆಲುವಿನ ಅಂತರ ನೋಟಾಗಿಂತ ಕಡಿಮೆ ಇದೆ.