ಚೆನ್ನೈ:

ಕಳೆದ ಕೆಲ ವರ್ಷಗಳಿಂದ ಸುದ್ದಿ ಮಾಡುತ್ತಿರುವ ದಕ್ಷಿಣ ಭಾರತದ ತ.ನಾ ರಾಜ್ಯದ ಪ್ರಮುಖ ತೈಲ ರವಾನೆ ಮಾಡುವ ಬಂದರಿನಲ್ಲಿ ಮತ್ತೆ ತೈಲ ಸೋರಿಕೆ ಮರುಕಳಿಸಿದೆ ಅತಿ ದೊಡ್ಡ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದು ಬಂದರಿನ ಉತ್ತರ ಭಾಗದಲ್ಲಿ ಈ ರೀತಿಯ ಅವಘಡ ಸಂಭವಿಸಿದೆ ಎಂದು ಬಂದರು ಅಧಿಕಾರಿಗಳು ತಿಳಿಸಿದ್ದಾರೆ.
ಬಂದರಿನ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿ ಇದು ಸರಿ ಸುಮಾರು ಎರಡ ರಿಂದ ಮೂರು ಟನ್ ನಷ್ಟು ಕಚ್ಛಾ ತೈಲ ಸಮುದ್ರದ ಪಾಲಾಗಿದೆ ಎಂದು ಬಂದರು ನಿರ್ವಹಣಾ ಪ್ರಾಧಿಕಾರ ತನ್ನ ಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. “ಎನ್ನೋರ್‌ನ ಕಾಮರಾಜರ್” ಬಂದರಿನಲ್ಲಿ ಈ ಘಟನೆ ನಡೆದಿದ್ದು, ತೈಲ ವರ್ಗಾವಣೆಗೆ ಬಳಸುವ ಪೈಪ್ ಒಡೆದ ಪರಿಣಾಮ ಈ ದುರಂತ ಸಂಭವಿಸಿದ್ದು ,ಎಂಟಿ ಕೊರಲ್ ಸ್ಟಾರ್ಸ್ ತೈಲ ಟ್ಯಾಂಕರ್ ನಿಂದ ಈ ಭಾರಿ ಪ್ರಮಾಣದ ತೈಲ ಸೋರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನು ಪ್ರಸ್ತುತ ಸಮುದ್ರಪಾಲಾಗಿರುವ ತೈಲ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಸಂಜೆ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮೂಲಗಳಿಂದ ದೃಢಪಟ್ಟಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
