ಒಂದು ರಾಷ್ಟ್ರ, ಒಂದು ಕಾರ್ಡ್‌ನಿಂದ ದೇಶದ ಜನತೆಗೆ ಲಾಭ: ಗಡ್ಕರಿ

ನವದೆಹಲಿ

   ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 4, 2019 ರಂದು ಅಹಮದಾಬಾದ್‌ನಲ್ಲಿ ಚಾಲನೆ ನೀಡಿದ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆ ರೀಟೇಲ್‌ ಶಾಪಿಂಗ್ ಮತ್ತು ಖರೀದಿಗಳ ಜೊತೆಗೆ ದೇಶಾದ್ಯಂತ ಮೆಟ್ರೊ ಮತ್ತು ಇತರ ಸಾರಿಗೆ ವ್ಯವಸ್ಥೆಗಳ ಮೂಲಕ ಸಾಟಿಯಿಲ್ಲದ ಪ್ರಯಾಣ ಅನುಭವವನ್ನು ಒದಗಿಸುತ್ತಿದೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಲಾಯಿತು.

    ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ರೂಪಿಸಿರುವ ರಾಷ್ಟ್ರೀಯ ಸಾಮಾನ್ಯ ಚಲನಶೀಲತೆ ಕಾರ್ಡ್ (ಎನ್‌ಸಿಎಂಸಿ) ಯೋಜನೆಯು ಬ್ಯಾಂಕುಗಳಲ್ಲಿರುವ ಮೂಲಸೌಕರ್ಯಗಳನ್ನು ಬಳಸಿಕೊಂಡು ನೆಟ್‌ವರ್ಕ್ ರಹಿತವಾದ ಆಫ್‌ಲೈನ್ ವಹಿವಾಟುಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

     ಸಾರಿಗೆ, ಚಿಲ್ಲರೆ ವ್ಯಾಪಾರ, ಟೋಲ್, ಪಾರ್ಕಿಂಗ್ ಮತ್ತು ಸ್ಮಾರ್ಟ್ ಸಿಟಿಗಳು ಸೇರಿದಂತೆ ಎಲ್ಲಾ ಪಾವತಿ ಅಪ್ಲಿಕೇಶನ್‌ಗಳಿಗೆ ಈ ಕಾರ್ಡ್ ಅನ್ನು ಬಳಸಬಹುದು. ಕಾರ್ಡಿನ ಸಂಗ್ರಹಿಸಲಾದ ಮೌಲ್ಯವು ಎಲ್ಲಾ ಕಡಿಮೆ ಮೌಲ್ಯದ ವಿಭಾಗಗಳಲ್ಲಿ ಆಫ್‌ಲೈನ್ ವಹಿವಾಟು ಸೌಲಭ್ಯವನ್ನು ನೀಡುತ್ತದೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap