ಒಂದು ದೇಶ ಒಂದು ರೇಷನ್ ಕಾರ್ಡ್ ಗೆ ಶೀಘ್ರದಲ್ಲಿಯೇ ಚಾಲನೆ..!

ನವದೆಹಲಿ:

    ದೇಶದಲ್ಲಿ ಸಾರ್ವಜನಿಕರಿಗಾಗಿ ಕಡಿಮೆ ದರದಲ್ಲಿ ಸರಕುಗಳನ್ನು ಕೊಳ್ಳಲು ಇಷ್ಟು ದಿನ ಇದ್ದಂತಹ ರಾಜ್ಯ ವಾರು ರೇಷನ್ ಕಾರ್ಡ್ ಬದಲಾಗಿ ಒಂದು ದೇಶ ಒಂದು ಕಾರ್ಡ್ ಯೋಜನೆಯ ಅಡಿಯಲ್ಲಿ ಈ ರೇಷನ್ ಕಾರ್ಡ್ ನಿಂದ ದೇಶದ ಯಾವುದೇ ಕೇಂದ್ರದಿಂದ ತಮ್ಮ ವಸ್ತುಗಳನ್ನು ಮುಕ್ತವಾಗಿ ಖರೀದಿಸಬಹುದಾಗಿದೆ ಎಂದು ನಾಗರೀಕ ಪಡಿತರ ಸರಬರಾಜು ಸಚಿವಾಲಯ ತಿಳಿಸಿದೆ.

    ಗ್ರಾಹಕರ ಆಹಾರ ಧಾನ್ಯಗಳು ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವುದಲ್ಲದೆ ಒಳ್ಳೆಯ ಗುಣಮಟ್ಟದ ಆಹಾರಧಾನ್ಯಗಳನ್ನು ಪೂರೈಸುವುದು ಹೊಸ ರೇಷನ್ ಕಾರ್ಡು ವಿತರಣೆಯ ಉದ್ದೇಶವಾಗಿದೆ. ಗ್ರಾಹಕರನ್ನು ಸಂತೃಪ್ತಿಪಡಿಸುವುದು ಪಿಡಿಎಸ್ ನಿರ್ವಾಹಕರ ಕೆಲಸವಾಗಿದೆ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಒಂದು ದೇಶ, ಒಂದು ಕಾರ್ಡು ಯೋಜನೆ ಜಾರಿಗೆ ತರಲು ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಜೂನ್ 1, 2020ಕ್ಕೆ ಗಡುವು ದಿನಾಂಕ ನಿಗದಿಪಡಿಸಿದ್ದಾರೆ ಎನ್ನಲಾಗಿದೆ. ಅದರ ಪ್ರಕಾರ ಕಾರ್ಡು ಹೊಂದಿರುವವರು ತಮ್ಮ ಪಾಲಿನ ಆಹಾರ ಧಾನ್ಯ ಮತ್ತು ಇತರ ವಸ್ತುಗಳನ್ನು ದೇಶದ ಯಾವುದೇ ಭಾಗದಲ್ಲಿ ಬೇಕಾದರೂ ಪಡೆಯಬಹುದು ಎಂದು ಸಚಿವಾಲಯ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap