ನವದೆಹಲಿ
ದೇಶದ ರಾಜಧಾನಿ ದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಮತ್ತೊಮ್ಮೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು,ಪರಿಣಾಮ ಗ್ರಾಹಕರು ಜೊತೆಗೆ ಬೆಳಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ ಬೆಳೆಹಾಳಾಯಿತಲ್ಲ ರೈತರು, ದುಬಾರಿ ದರದಲ್ಲಿ ಹೇಗಪ್ಪ ಕೊಳ್ಳುವುದು ಎಂಬ ಚಿಂತೆಯಲ್ಲಿ ಗ್ರಾಹಕರು ಸಹ ಕಣ್ಣೀರು ಹಾಕುತ್ತಿದ್ದಾರೆ .
ಹಲವು ರಾಜ್ಯದಲ್ಲಿ ಸುರಿದ ಮಳೆ, ಪ್ರವಾಹದ ಕಾರಣ ಈರುಳ್ಳಿ ಉತ್ಪಾದನೆ ಕಡೆಮೆಯಾಗಿ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕಳೆದ ವಾರ ತರಕಾರಿಗಳ ಬೆಲೆ ಶೇ. 40ರಿಂದ 50ರಷ್ಟು ಏರಿಕೆಯಾಗಿದೆ.ದೆಹಲಿಯ ಆಜಾದ್ಪುರ ಮಂಡಿಯಲ್ಲಿ ಗುರುವಾರ ಈರುಳ್ಳಿಯ ದರ ಕೆಜಿಗೆ 30ರಿಂದ 46ರೂಪಾಯಿಗೆ ಮುಟ್ಟಿತ್ತು, ಮಹಾರಾಷ್ಟ್ರದ ನಾಸಿಕ್ನಲ್ಲಿ ಈರುಳ್ಳಿಯ ಕೆಜಿಗೆ 50ರಿಂದ 55ರಂತೆ ಮಾರಾಟ ವಾಗುತ್ತಿದೆ. ಈರುಳ್ಳಿಯ ದಸ್ತಾನು ಈ ಬಾರಿ ಕಡಿಮೆಯಾದ್ದರಿಂದ ಸಗಟು ಮಾರುಕಟ್ಟೆಯಲ್ಲಿ ಅಗತ್ಯವಿರುವಷ್ಟು ಈರುಳ್ಳಿ ಲಭ್ಯವಿಲ್ಲದ ಕಾರಣ ಬೆಲೆ ಜೊತೆ ಜಾಸ್ತಿಯಾಗಿ ಗ್ರಾಹಕರು ಮತ್ತು ಬೆಳೆಗಾರರ ಕಣ್ಣಲ್ಲಿ ನೀರು ತರಿಸುತ್ತಿದೆ.
ಆಜಾದ್ಪುರದ ಈರುಳ್ಳಿ ಮಾರಾಟಗಾರರ ಸಂಘದ ಅಧ್ಯಕ್ಷ ರಾಜೇಂದ್ರ ಶರ್ಮ ಪ್ರಕಾರ, ದಕ್ಷಿಣ ರಾಜ್ಯಗಳಲ್ಲಿ ಇತ್ತೀಚೆಗೆ ಬಿದ್ದ ಭಾರೀ ಮಳೆ, ಪ್ರವಾಹದ ಕಾರಣ ಈರುಳ್ಳಿ ಬೆಳೆ ಹಾಳಾಗಿ ಉತ್ಪಾದನೆ ಕಡಿಮೆಯಾಗಿ, ಬೇಡಿಕೆ ಹೆಚ್ಚಾಗಿದೆ,ಪರಿಣಾಮ ಬೆಲೆಯೂ ಏರಿಕೆಯಾಗಿದೆ ದೇಶದಲ್ಲಿ ಈರುಳ್ಳಿ ಪೂರೈಕೆ ಬಹಳ ಕಡಿಮೆಯಾಗಿದೆ.
ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡಿನಲ್ಲಿ ಈ ವರ್ಷ ಮಳೆ ಪ್ರವಾಹ ಉಂಟಾಗಿದ್ದರಿಂದ ಈ ರಾಜ್ಯಗಳಲ್ಲಿ ಈರುಳ್ಳಿ ಬೆಳೆ ಗಣನೀಯವಾಗಿ ಕಡಿಮೆಯಾಗಿದೆ ಹೀಗಾಗಿ, ಆ ಭಾಗದಿಂದ ಬರುವ ಈರುಳ್ಳಿ ಮಾರುಕಟ್ಟೆಗೆ ಬಂದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವ ಸಗಟು ಮಾರುಕಟ್ಟೆಗಳಿಗೂ ಭಾರಿ ಪ್ರಮಾಣದ ಈರುಳ್ಳಿದಾಸ್ತಾನು ಬರುತ್ತಿಲ್ಲ ಎಂದು ವರ್ತಕರು ಆತಂಕ ತೋಡಿಕೊಂಡಿದ್ದರೆ, ಇನ್ನೊಂದು ಕಡೆ ಹೇಗಪ್ಪ ಈರುಳ್ಳಿ ಕೊಳ್ಳುವುದು ಎಂಬ ಚಿಂತೆ ಗ್ರಾಹಕರನ್ನೂ ಕಾಡುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ