ನವದೆಹಲಿ:
ಈ ಬಾರಿ ಸಾರ್ಕ್ ಶೃಂಗ ಸಭೆ ಇಸ್ಲಾಮಾಬಾದ್’ನಲ್ಲಿ ನಡೆಯಲಿದ್ದು ಅದರಲ್ಲಿ ಭಾಗವಹಿಸುವಂತೆ ಪಾಕಿಸ್ತಾನ ಕಳುಸಿರುವಂತಹ ಆಹ್ವಾನವನ್ನು ಭಾರತ ಸರಾಸಗಟಾಗಿ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳದಿರುವ ಭಾರತದ ನಿಲುವು ಬದಲಾಗುವುದಿಲ್ಲ ಎಂದು ಭಾರತ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ತಿಳಿಸಿದ್ದಾರೆ . ಸಾರ್ಕ್ ಶೃಂಗಸಭೆಯಲ್ಲಿ ಭಾರತ ಪಾಲ್ಗೊಳ್ಳುವುದೂ ಇಲ್ಲ ಏಕೆಂದರೆ ಪಾಕಿಸ್ತಾನ ಇನ್ನೂ ತನ್ನ ಕೆಟ್ಟ ಬುದ್ದಿ ಬಿಟ್ಟು ಬಾಳುತ್ತಿಲ್ಲ ಅದಲ್ಲದೇ ಗಡಿಯಲ್ಲಿ ಆಗಾಗ್ಗೆ ಕದನ ವಿರಾಮ ಉಲ್ಲಂಘನೆ ಕೂಡ ಮಾಡುತ್ತಿದ್ದು ಇದರಿಂದ ಎರಡೂ ದೇಶಗಳ ಮಧ್ಯದ ದ್ಯೈಪಾಕ್ಷಿಕ ಸಂಬಂಧ ಅಷ್ಟೇನೂ ಚೆನ್ನಾಗಿಲ್ಲ ಉಗ್ರವಾದ ಕೊನೆ ಯಾದರೆ ಮಾತ್ರ ಮುಂದಿನ ಮಾತು ಕತೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








