ನವದೆಹಲಿ
ಪಂಚಾಯತ್ ರಾಜ್ ಸಚಿವಾಲಯ 10 ಲಕ್ಷ ಕೋಟಿ ರೂ. ಹಂಚಿಕೆ ಮಾಡುವಂತೆ 15ನೇ ಹಣಕಾಸು ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಪ್ರಸ್ತಾವನೆ 14ನೇ ಹಣಕಾಸು ಆಯೋಗ ಮಾಡಿದ್ದ ಹಂಚಿಕೆಗಿಂತ ಶೇ.399ರಷ್ಟು ಅಧಿಕವಾಗಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.ಸಚಿವಾಲಯದ ಕಾರ್ಯದರ್ಶಿ ರಾಹುಲ್ ಭಟ್ನಾಗರ್ ಸೇರಿದಂತೆ ಪಂಚಾಯತ್ ರಾಜ್ ಸಚಿವಾಲಯದ ಹಿರಿಯ ಅಧಿಕಾರಿಗಳು ಆಯೋಗದ ಅಧ್ಯಕ್ಷ ಎನ್.ಕೆ.ಸಿಂಗ್ ಅವರನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಚಾಯ್ತಿಯ ವಿವಿಧ ವಿಭಾಗಗಳಿಗೆ ನಿಧಿ ಹಂಚಿಕೆ ಕುರಿತು ಸಚಿವಾಲಯ ಹಾಗೂ ಸಮಾಲೋಚನೆ ನಡೆಸಿದವು. ಪಂಚಾಯ್ತಿಗಳ ಉನ್ನತೀಕರಣ, ಡಿಜಿಟಲಿಕರಣ ಮೊದಲಾದ ಅಭಿವೃದ್ಧಿ ವಲಯಗಳಿಗೆ ನಿಧಿ ಹಂಚಿಕೆಯನ್ನು ಈ ಪ್ರಸ್ತಾವನೆ ಒಳಗೊಂಡಿದೆ ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
