ಪೇಟಿಎಂಗೆ 4217 ಕೋಟಿ ನಷ್ಟ..!

ಮುಂಬೈ

     ಭಾರತದ ಡಿಜಿಟಲ್ ಹಣ ವರ್ಗಾವಣೆ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿ ಆನ್ ಲೈನ್ ಹಣವರ್ಗಾವಣೆಗೆ ಶ್ರೀಕಾರ ಬರೆದ ಪೇಟಿಎಂ ಸಂಸ್ಥೆ ಇದೀಗ ಭಾರೀ ನಷ್ಟಕ್ಕೆ ಅನುಭವಿಸಿದೆ. ಪೇಟಿಎಂ ನ ಮೂಲ ಸಂಸ್ಥೆಯಾದ ಒನ್ 97 ಕಮ್ಯೂನಿಕೇಷನ್ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 4,217.20 ಕೋಟಿ ನಷ್ಟ ಅನುಭವಿಸಿದೆ ಎಂಬ ದಾಖಲೆಗಳು ಇದೀಗ ಬಿಡುಗಡೆಯಾಗಿ ಅಚ್ಚರಿ ಮೂಡಿಸಿದೆ.

     ಒನ್ 97 ಕಮ್ಯೂನಿಕೇಷನ್ ಸಂಸ್ಥೆ ಕಳೆದ 2018ರ ಆರ್ಥಿಕ ವರ್ಷದಲ್ಲಿ 3,309.61 ಕೋಟಿ ವ್ಯವಹಾರ ನಡೆಸಿದೆ. ಇನ್ನೂ 2019ರಲ್ಲಿ 3,579.67 ಕೋಟಿ ವ್ಯವಹಾರ ದಾಖಲಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ಪೇಟಿಎಂ ವ್ಯವಹಾರ ದೇಶದಲ್ಲಿ ಶೇ. 8.2 ರಷ್ಟು ವೃದ್ಧಿಯಾಗಿದೆ. ಆದರೆ, ಬ್ರ್ಯಾಂಡ್ ವ್ಯಾಲ್ಯೂ ಅಧಿಕ ಮಾಡುವ ಹಪಹಪಿಯಲ್ಲಿ ಪೇಟಿಎಂ ಸಂಸ್ಥೆ ಖರ್ಚು ಮಾಡಿರುವ ಹಣ ಈ ನಷ್ಟಕ್ಕೆ ಕಾರಣ ಎನ್ನಲಾಗುತ್ತಿದೆ.

   ಕಳೆದ 2018ರಲ್ಲಿ ಪೇಟಿಎಂ ತನ್ನ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚು ಮಾಡಲು ಸುಮಾರು 4,864.53 ಕೋಟಿ ಹಣ ವ್ಯಯಿಸಿದೆ, 2019ರಲ್ಲಿ 7730.14 ಕೋಟಿ ಹಣ ವ್ಯಯಿಸಿದೆ.ಇದೇ ಕಾರಣಕ್ಕೆ ನಷ್ಟದ ಪ್ರಮಾಣ ಅಧಿಕವಾಗಿದೆ ಎಂದು ಪೇಟಿಎಂ ಸಂಸ್ಥೆ ತನ್ನ ವರ್ಷಾಂತ್ಯ ಆರ್ಥಿಕ ವರದಿಯಲ್ಲಿ ತಿಳಿಸಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link